×
Ad

ಕೇರಳದ ಪಾಲನ ಕೇಂದ್ರಗಳಲ್ಲಿ ನಿಗಾ ಕ್ಯಾಮರಾ

Update: 2017-05-30 14:23 IST

ತಿರುವನಂತಪುರಂ,ಮೇ 30: ಡೇ ಕೇರ್‌ಗಳಲ್ಲಿ ನಿಗಾವಿರಿಸಲು ಕ್ಯಾಮರಾ ಸ್ಥಾಪಿಸಬೇಕೆಂದು ತಿರುವನಂತಪುರಂ ರೇಂಜ್ ಐಜಿ ಆದೇಶಿಸಿದ್ದಾರೆ. ತಂದೆತಾಯಿಗಳಿಗೆ ಅವರ ಮಕ್ಕಳ ದೃಶ್ಯಗಳನ್ನು ಮೊಬೈಲ್ ಮತ್ತುಕಂಪ್ಯೂಟರ್‌ನಲ್ಲಿ ನೋಡುವ ವ್ಯವಸ್ಥೆಯನ್ನು ಪಾಲನ ಕೇಂದ್ರಗಳು ಮಾಡಬೇಕೆಂದು ಐಜಿ ಸೂಚಿಸಿದ್ದಾರೆ.

ಒಂದು ತಿಂಗಳೊಳಗೆ ಕ್ಯಾಮರಾ ಸ್ಥಾಪಿಸಬೇಕೆಂದು ಎಸ್ಸೈಗಳಿಗೆ ಸೂಚನೆ ನೀಡಿದ್ದಾರೆ. ತಿರುವನಂತಪುರಂ, ಕೊಲ್ಲಂ, ಪತ್ತನತಿಟ್ಟಂ ಜಿಲ್ಲೆಗಳಲ್ಲಿ ಈ ಸೂಚನೆ ಮೊದಲ ಹಂತದಲ್ಲಿ ಜಾರಿಗೆ ತರಲಾಗುತ್ತಿದೆ.

ಕೊಚ್ಚಿಯಲ್ಲಿ ಪಾಲನ ಕೇಂದ್ರದ ಮಾಲಕಿ ಮಗುವಿಗೆ ಹೊಡೆಯುತ್ತಿರುವ ದೃಶ್ಯಗಳು ಇತ್ತೀಚೆಗೆ ಬಹಿರಂಗಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪಾಲನ ಕೇಂದ್ರಗಳಲ್ಲಿ ಕ್ಯಾಮರಾ ಇರಿಸುವ ಚಿಂತನೆಗೆ ಮುಂದಾಗಿದ್ದಾರೆ. ಕೊಚ್ಚಿಯಲ್ಲಿ ಮಗುವಿಗೆ ಹೊಡೆದ ಪಾಲನ ಕೇಂದ್ರದ ಮಾಲಕಿಯ ವಿರುದ್ಧ ಪೊಲೀಸರು ಕೇಸುದಾಖಲಿಸಿ ತನಿಖೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News