ಕೇರಳ ಸರಕಾರಕ್ಕೆ ಪ್ರತಿಪಕ್ಷದ ಸಂಪೂರ್ಣ ಬೆಂಬಲ: ರಮೇಶ್ ಚೆನ್ನಿತ್ತಲ

Update: 2017-05-30 09:25 GMT

ಆಲಪ್ಪುಝ,ಮೇ 30: ಕೇಂದ್ರಸರಕಾರದ ಜಾನುವಾರು ಹತ್ಯೆ ನಿಯಂತ್ರಣ ವಿಧೇಯಕವನ್ನು ವಿಫಲಗೊಳಿಸಲು ರಾಜ್ಯಸರಕಾರಕ್ಕೆ ವಿಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕೇರಳ ವಿಧಾನಸಭೆಯ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಮಾಂಸ ಮಾರಾಟ ಶೃಂಖಲೆಗೆ ಸಹಕರಿಸಲಿಕ್ಕಾಗಿ ಕೇಂದ್ರಸರಕಾರ ಲಕ್ಷಾಂತರ ಜನಸಾಮಾನ್ಯರ ಜೀವನದ ತುತ್ತಿಗೆ ಕನ್ನಹಾಕಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಾನುವಾರು ಹತ್ಯೆ ನಿಯಂತ್ರಿಸುವುದು ಜನರ ಸ್ವಾತಂತ್ರ್ಯದ ವಿರುದ್ಧ ಹಸ್ತಕ್ಷೇಪವಾಗಿದೆ. ಈ ತೀರ್ಮಾನದ ಹಿಂದೆ ಆರ್ಥಿಕ ಮತ್ತು ರಾಜಕೀಯ ದುರುದ್ದೇಶಗಳಿವೆ. ಮಾಂಸ ನಿಷೇಧ ಪಟ್ಟಿಯಲ್ಲಿ ಕೆಲವು ಪ್ರಾಣಿಗಳನ್ನು ಮಾತ್ರ ಸೇರಿಸಿದ್ದರ ಮಾನದಂಡವೇನು. ಅದುಸ್ಪಷ್ಟಪಡಿಸಲಿ. ರಾಜಕೀಯ ಉದ್ದೇಶಕ್ಕಾಗಿ ಅಡುಗೆಕೋಣೆಯವರೆಗೆ ನಿಯಂತ್ರಣ ವಿಧಿಸುವ ಬಿಜೆಪಿ ಸರಕಾರ ದೇಶದ ಫೆಡರಲ್ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ.

ಪಾಠಪುಸ್ತಕಗಳನ್ನು ಕಾವೀಕರಣಗೊಳಿಸಿದ ಬಳಿಕ ಆಹಾರದಲ್ಲಿ ಫ್ಯಾಶಿಸ್ಟ್ ಅಜೆಂಡಾಗಳನ್ನು ಜಾರಿಮಾಡುವುದು ಬಿಜೆಪಿಯ ಬಯಕೆಯಾಗಿದೆ ಎಂದು ರಮೇಶ್ ಚೆನ್ನಿತ್ತಲ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News