ಮಾಂಡೋವಿ ಮೋಟಾರ್ಸ್: ವಿಟ್ಲ ಗ್ರಾಮೀಣ ಸರ್ವೀಸ್ ಸೆಂಟರಿನಲ್ಲಿ ಸೇವಾ ಕಾರ್ಯಾಗಾರ
Update: 2017-05-30 15:04 IST
ವಿಟ್ಲ, ಮೇ 30: ಮಾರುತಿ ವಾಹನಗಳ ಅಧಿಕೃತ ವಿತರಕ ಸಂಸ್ಥೆ ಮಾಂಡೋವಿ ಮೋಟಾರ್ಸ್‌ನ ವಿಟ್ಲ ಗ್ರಾಮೀಣ ಸೇವಾ ಸೆಂಟರ್‌ನಲ್ಲಿ ಮಾರುತಿ ಸುಝುಕಿ ಸಂಸ್ಥೆಯ ನಿಯಮಾವಳಿಗಳನ್ವಯ ಮಾರುತಿ ವಾಹನಗಳ ಮೆಷಿನರಿ ಮತ್ತು ಬಿಡಿಭಾಗಗಳ ಸೇವಾ ಕಾರ್ಯಾಗಾರ ಮೇ 29ರಂದು ನಡೆಯಿತು.
ಮಾರುತಿ ಸುಝುಕಿ ಸಂಸ್ಥೆಯ ಏರಿಯಾ ಸೇಲ್ಸ್ ಮ್ಯಾನೇಜರ್ ದೀಪಕ್ ಶರ್ಮಾ ಮತ್ತು ಏರಿಯಾ ಸರ್ವೀಸ್ ಮ್ಯಾನೇಜರ್ ಸತ್ಯಜಿತ್ ಮೋಹಾಪಾತ್ರ ಕಾರ್ಯಾಗಾರವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ವಿಟ್ಲ, ಡಾ.ಅರುಣ್ ಕಜೆ, ಮಾಂಡೋವಿ ಮೋಟಾರ್ಸ್‌ನ ಸರ್ವೀಸ್ ವಿಭಾಗದ ಜನರಲ್ ಮ್ಯಾನೇಜರ್ ಪಾರ್ಶ್ವನಾಥ ಆಗಮಿಸಿದ್ದರು.
ಸಂಸ್ಥೆಯ ಎಜಿಎಂ- ಸೇಲ್ಸ್, ಶಶಿಧರ ಕಾರಂತ್ ಸ್ವಾಗತಿಸಿದರು. ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಮುರಳೀಧರ ಬಿ.ಜೆ. ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಾಗಾರದಲ್ಲಿ ಎಲ್ಲಾ ವಿನೂತನ ಡಿಸೈರ್ ಕಾರುಗಳನ್ನು ವಿಟ್ಲ ಮಾರುಕಟ್ಟೆಗೆ ಪರಿಚಯಿಸಲಾಯಿತು.