×
Ad

ಮಂಗಳೂರು: ಮೆಡಿಕಲ್ ಸ್ಟೋರ್ಸ್‌ ಬಂದ್

Update: 2017-05-30 19:08 IST

ಮಂಗಳೂರು, ಮೇ 30: ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮಾಡುವ ಪ್ರಕ್ರಿಯೆಯನ್ನು ವಿರೋಧಿಸಿ ದೇಶಾದ್ಯಂತ ನಡೆಯುವ ಔಷಧ ಮಾರಾಟ ಮಳಿಗೆಗಳು ಮಂಗಳವಾರ ಬಂದ್ ಆಗಿದ್ದು, ದ.ಕ.ಜಿಲ್ಲೆಯ ಮಂಗಳೂರು ಸಹಿತ ಪ್ರಮುಖ ಪಟ್ಟಣಗಳಲ್ಲಿರುವ ಮೆಡಿಕಲ್ ಸ್ಟೋರ್ಸ್‌ಗಳು ಮುಚ್ಚಲ್ಪಟ್ಟಿವೆ.

ಆನ್‌ಲೈನ್‌ನಲ್ಲಿ ಔಷಧ ಮಾರಾಟ, ವೈದ್ಯರು ನೀಡುವ ಔಷಧದ ಪ್ರತಿಯನ್ನು ಮೆಡಿಕಲ್ ಸ್ಟೋರ್‌ನವರು ಸ್ಕಾನ್ ಮಾಡಿ ಕೇಂದ್ರದ ಇ-ಪೋರ್ಟಲ್‌ಗೆ ಅಪ್‌ಲೋಡ್ ಮಾಡಬೇಕು ಎಂದು ಕೇಂದ್ರ ಸರಕಾರ ಕೈಗೊಂಡಿರುವ ಕ್ರಮದ ವಿರುದ್ಧ ಮೆಡಿಕಲ್ ಸ್ಪೋರ್ಸ್‌ನ ಮಾಲಕರು ಮಳಿಗೆಗಳನ್ನು ಮುಚ್ಚಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಸುಮಾರು 520 ಮೆಡಿಕಲ್ ಸ್ಟೋರ್ಸ್‌ಗಳು ಬಂದ್‌ನಲ್ಲಿ ಪಾಲ್ಗೊಂಡಿದ್ದವು. ಆದರೆ ತುರ್ತು ಸಂದರ್ಭ ಆಸ್ಪತ್ರೆಗಳಲ್ಲಿರುವ ಮೆಡಿಕಲ್ ಅಂಗಡಿಗಳು ಎಂದಿನಂತೆ ಕಾರ್ಯಾಚರಿಸಿತ್ತು.
ಸಮಸ್ಯೆಯಾಗಿಲ್ಲ: ಮೆಡಿಕಲ್ ಸ್ಟೋರ್ಸ್‌ಗಳ ಬಂದ್‌ನಿಂದ ಯಾರಿಗೂ ತೊಂದರೆಯಾದ ಬಗ್ಗೆ ಮಾಹಿತಿ ಇಲ್ಲ. ಅಲ್ಲದೆ ಸರಕಾರದ ಜನರಿಕ್ ಔಷಧ ಮಳಿಗೆಗಳು ತೆರೆದಿದ್ದ ಕಾರಣ ಯಾವ ಸಮಸ್ಯೆಯೂ ಆಗಿಲ್ಲ ಎಂದು ಡಿಎಚ್‌ಒ ಡಾ. ರಾಮಕೃಷ್ಣ ರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News