×
Ad

ಗೋವಾ: ಪ್ಲಾಸ್ಟಿಕ್ ಚೀಲ ಬಳಸಿದರೆ 5,000 ರೂ. ದಂಡ

Update: 2017-05-30 20:00 IST

ಪಣಜಿ, ಮೇ 30: ಜುಲೈ 1ರಿಂದ ಗೋವಾದಲ್ಲಿ ಪ್ಲಾಸ್ಟಿಕ್ ಚೀಲವನ್ನು ಮಾರಾಟ ಮಾಡಿದರೆ ಅಥವಾ ಅದನ್ನು ಬಳಸಿದರೆ 5,000 ರೂ. ದಂಡ ತೆರಬೇಕಾಗುತ್ತದೆ.

ವಿಶ್ವದಾದ್ಯಂತ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಗೋವಾವನ್ನು ಸ್ವಚ್ಛ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೈಗೊಂಡ ಕಠಿಣ ಕ್ರಮವನ್ನು ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಇಂದು ಘೋಷಿಸಿದರು.

ಶಾಪಿಂಗ್‌ಗೆ ತೆರಳುವಾಗ ಬಟ್ಟೆಯ ಚೀಲವನ್ನು ಜೊತೆಯಲ್ಲಿ ಒಯ್ಯುವಂತೆ ಅವರು ಜನತೆಗೆ ಮನವಿ ಮಾಡಿಕೊಂಡಿದ್ದಾರೆ. ಆರಂಭಿಕ ಹಂತದಲ್ಲಿ ದಂಡದ ಮೊತ್ತದಲ್ಲಿ ಸ್ವಲ್ಪ ರಿಯಾಯಿತಿ ನೀಡಲಾಗುವುದು. ಆದರೆ ಪ್ಲಾಸ್ಟಿಕ್ ನಿಷೇಧ ಖಚಿತವಾಗಿ ಜಾರಿಗೆ ಬರಲಿದೆ ಎಂದ ಅವರು, ಜನತೆ ಬೇಜವಾಬ್ದಾರಿಯಿಂದ ವರ್ತಿಸಿದರೆ ಸರಕಾರದ ಕಾರ್ಯ ನಿರ್ವಹಣೆ ಕಷ್ಟವಾಗಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News