ಡಿ.ಜೆ.ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ
ಮೂಡುಬಿದಿರೆ, ಮೇ 30: 2017-18 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಮಂಗಳವಾರ ಶಾಲೆಯಲ್ಲಿ ವಿಜೃಂಭಣೆ ಯಿಂದ ಆಚರಿಸಲಾಯಿತು.
ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ವಿದ್ಯಾರ್ಥಿಗಳಿಗೆ ಸರಕಾರ ದಿಂದ ಕೊಡಲ್ಪಡುವ ಉಚಿತ ಪಠ್ಯಪುಸ್ತಕ , ಶಾಲಾ ಆಡಳಿತ ಮಂಡಳಿಯಿಂದ ಕೊಡುವ ಉಚಿತ ಸಮವಸ್ತ್ರ, ಪ್ರತಿ ವರ್ಷವು ನೀಡುವಂತೆ ಮಕ್ಕಳಿಗೆ ಉಚಿತ ನೋಟ್ ಪುಸ್ತಕ , ಸ್ಲೇಟ್ , ಸಮವಸ್ತ್ರವನ್ನು ದಾನಿಗಳಾದ ಎಂ.ವಿ. ಶೆಟ್ಟಿ ಕಾಪ್ರಿಗುಡ್ಡೆ ಮಂಗಳೂರು ಮತ್ತು ಜ್ಞಾನಚಂದ್ರರು, ಪೃಥ್ವಿರಾಜ್ ಶೆಟ್ಟಿಯವರು ನೀಡಿದ್ದಾರೆ. ಈ ಸಮಾರಂಭದ ಅಧ್ಯಕ್ಷತೆಯನ್ನು ನ್ಯಾಯವಾದಿ ಬಾಹುಬಲಿ ಪ್ರಸಾದ್ ವಹಿಸಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಶಶಿಕಾಂತ್ ವೈರವರು ಪ್ರಾಸ್ತಾವಿಕ ಮಾತಗಳನ್ನಾಡಿದರು. ವೇದಿಕೆಯಲ್ಲಿ ಅತಿಥಿಗಳಾದ ಶ್ರೀಮತಿ ಮಮತಾ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ . ಕೆ. ರವಿಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾದ ಜಗದೀಶ್ ನಾಯಕ್ ಮತ್ತು ತಾಯಂದಿರ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ನಂದಾರವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಜಗದೀಶ್ ಅಜ್ರಿ ಸ್ವಾಗತಿಸಿ, ಶಾಲಾ ಸಹಶಿಕ್ಷಕಿ ಶ್ರೀಮತಿ ಲಕ್ಷ್ಮೀ ಧನ್ಯವಾದ ಗೈದರು. ಶಾಲಾ ಸಹಶಿಕ್ಷಕಿ ಶ್ರೀಮತಿ ತ್ರಿಶಲಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಶಿಕ್ಷಕೇರ ಬಂಧುಗಳು ಉಪಸ್ಥಿತರಿದ್ದರು.