×
Ad

ಕುಂಪಲ ಬೈಪಾಸ್ ಬಳಿ ಕಾರು-ಶಾಲಾ ಬಸ್ ಅಪಘಾತ

Update: 2017-05-30 21:11 IST

ಉಳ್ಳಾಲ, ಮೇ 30: ಕುಂಪಲ ಬೈಪಾಸ್ ಬಳಿ ಶಾಲಾ ಬಸ್ ಮತ್ತು ಕಾರಿನ ನಡುವೆ ಮಂಗಳವಾರ ಮಧ್ಯಾಹ್ನ ಅಪಘಾತ ನಡೆದಿದೆ.

 ಮಂಗಳೂರಿನಿಂದ ಕಾಸರಗೋಡಿನ ಕಡೆ ತೆರಳುತ್ತಿದ್ದ ಕಾರು ಅದೇ ದಿಕ್ಕಿನಲ್ಲಿ ಸಾಗುತ್ತಿದ್ದ ಶಾಲಾ ಬಸ್ ನ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರು ನುಜ್ಜುಗುಜ್ಜಾಗಿದ್ದು, ಕಾರಿನೊಳಗಿದ್ದವರು ಸಣ್ಣಪುಟ್ಟಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News