×
Ad

ಅರ್ನಬ್ V/S ಅರ್ನಬ್ ವೀಡಿಯೊ ವೈರಲ್

Update: 2017-05-30 21:54 IST

ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ಇತ್ತೀಚಿನ ಹಾಗು ಹಳೆಯ ವೀಡಿಯೊಗಳನ್ನು ಸೇರಿಸಿರುವ ವೀಡಿಯೋವೊಂದು ಈಗ ವೈರಲ್ ಆಗಿದೆ. 

ಪ್ರಸಕ್ತ  ಬಿಜೆಪಿ ಹಾಗು ಕೇಂದ್ರ ಸರ್ಕಾರದ ಪರವಾಗಿ  ಹಾಗು ಉಳಿದೆಲ್ಲ ಪಕ್ಷಗಳ ವಿರುದ್ಧವಾಗಿ ಸುದ್ದಿ ಪ್ರಸಾರ ಮಾಡುವ ಚಾನಲ್ ಹಾಗು ಪತ್ರಕರ್ತ ಎಂದು ಹಣೆಪಟ್ಟಿ ಪಡೆದಿರುವ ಅರ್ನಬ್ , ಕೇಂದ್ರ ಸರ್ಕಾರದ ಗೋಹತ್ಯೆ ನಿಷೇಧ ಕಾನೂನಿನ ವಿರುದ್ಧ ನಡೆಯುತ್ತಿರುವ ಬೀಫ್ ಫೆಸ್ಟ್ ವಿರುದ್ಧ ರಿಪಬ್ಲಿಕ್ ಟಿವಿಯಲ್ಲಿ ಕಿಡಿ ಕಾರಿದ್ದಾರೆ. ಬೀಫ್ ಫೆಸ್ಟ್ ಹೆಸರಲ್ಲಿ ಹಿಂದೂಗಳನ್ನು ನೋಯಿಸುವ ಕೆಲಸ ಆಗುತ್ತಿದೆ ಎಂದು ಅವರು ದೂರಿದ್ದಾರೆ. 

ಆದರೆ ವಿಚಿತ್ರವೇನೆಂದರೆ, ಇದೇ ಅರ್ನಬ್ ಟೈಮ್ಸ್ ನೌ ನಲ್ಲಿರುವಾಗ ಮಹಾರಾಷ್ಟ್ರ ಸರ್ಕಾರ ಬೀಫ್ ತಿನ್ನುವುದರ ವಿರುದ್ಧ  ನಿರ್ಬಂಧ ವಿಧಿಸಿದಾಗ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಬೀಫ್ ನಿಷೇಧದ ಹೆಸರಲ್ಲಿ ಬಿಜೆಪಿ ಸರ್ಕಾರ ಜನರ ಗಮನವನ್ನು ನೈಜ ವಿಷಯಗಳಿಂದ ಬೇರೆ ವಿಷಯಗಳತ್ತ ತಿರುಗಿಸುತ್ತಿದೆ. ಇಂತಹ ಧಾರ್ಮಿಕ ಬೇಧಭಾವ ಸೃಷ್ಟಿಸುವ ಕೆಲಸಗಳ ಬದಲು ಉದ್ಯೋಗ ಸೃಷ್ಟಿಯಂತಹ ಯೋಜನೆ ತರಬೇಕು ಇತ್ಯಾದಿ ಉಪದೇಶ ಮಾಡಿದ್ದರು.

ಈಗ ಕಾಂಗ್ರೆಸ್ ನ ಗೌರವ್ ಪಂಧಿ ಎಂಬವರು ಈ ಎರಡೂ ತದ್ವಿರುದ್ಧ ವೀಡಿಯೋಗಳನ್ನು ಒಟ್ಟಿಗೆ ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ಅದೀಗ ವೈರಲ್ ಆಗಿದೆ. 

ಆ ವೀಡಿಯೊ ಇಲ್ಲಿದೆ , ನೋಡಿ : 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News