×
Ad

ಅಲ್ ಮದೀನ: ಹಳೆ ವಿದ್ಯಾರ್ಥಿಗಳಿಂದ ಪುಸ್ತಕ ವಿತರಣೆ

Update: 2017-05-30 22:03 IST

ನರಿಂಗಾನ, ಮೇ 30: ಮಂಜನಾಡಿ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ನ ಹಳೆ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ವತಿಯಿಂದ ಸಂಸ್ಥೆಯ ಅನಾಥ ಬಡ ಮಕ್ಕಳಿಗೆ ಶಾಲಾ ಪುಸ್ತಕ ಮತ್ತು ಸ್ಕೂಲ್ ಬ್ಯಾಗ್ ವಿತರಣೆ  ನಡೆಯಿತು.

ಸಂಸ್ಥೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಸಂಸ್ಥೆಯ ಮಾಜಿ ಅಧ್ಯಾಪಕ ರಶೀದ್ ಉಸ್ತಾದರ ಮಾರ್ಗದರ್ಶನದಂತೆ ಈ ಸೇವಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದರು.

ಹಳೆ ವಿದ್ಯಾರ್ಥಿ ನಿಝಾರ್ ಗುರುಪುರ ತನ್ನ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಕೊಡುಗೆ ನೀಡಿದರು. ಉಳಿದಂತೆ ದೇಶ ವಿದೇಶದಲ್ಲಿರುವ ಹಳೆ ವಿದ್ಯಾರ್ಥಿಗಳು ಪುಸ್ತಕಗಳಿಗಾಗಿ ದೇಣಿಗೆ ನೀಡಿದರು.

ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ರಝಾಕ್ ಮಾಸ್ಟರ್ ಸ್ವಾಗತಿಸಿದರು. ಹೈದರ್ ಸಖಾಫಿ, ಕಬೀರ್ ಸಅದಿ, ಅಬ್ದುಲ್ ಖಾದರ್ ಝುಹ್ರಿ, ಹಾರಿಸ್ ಮಾಸ್ಟರ್, ಹಾಫಿಲ್ ಅಝೀಝ್ ಹಿಮಮಿ, ಹಾಫಿಲ್ ರಾಶಿದ್ ಸಖಾಫಿ, ಬದ್ರುಲ್ ಮುನೀರ್ ಹಿಮಮಿ, ಇಬ್ರಾಹೀಂ ಮದನಿ ಹಳೆ ವಿದ್ಯಾರ್ಥಿ ಪ್ರತಿನಿಧಿಗಳಾದ ಇಮ್ತಿಯಾಝ್ ಸಜೀಪ, ಖಾದರ್ ಪಾವೂರು, ಸಿರಾಜ್ ಗುರುಪುರ, ಹೈದರ್ ಮಂಜನಾಡಿ, ಅಮೀರ್ ಸಿದ್ದಾಪುರ ಮುಂತಾದವರು ಉಪಸ್ಥಿತರಿದ್ದರು.

ಅಬ್ದುರ್ರಹ್ಮಾನ್ ವಳಾಲ್ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News