ಪಶ್ಚಿಮ ಬಂಗಾಳದಲ್ಲಿ ಚಂಡ ಮಾರುತ: ಕರಾವಳಿಯ ವಿವಿಧ ಕಡೆ ಮೋಡ ಕವಿದ ವಾತಾವರಣ
Update: 2017-05-30 22:15 IST
ಮಂಗಳೂರು, ಮೇ 30: ಪಶ್ಚಿಮ ಬಂಗಾಳದಲ್ಲಿ ಚಂಡ ಮಾರುತದ ಪರಿಣಾಮವಾಗಿ ಮಂಗಳೂರು ಸೇರಿದಂತೆ ಕರಾವಳಿಯ ವಿವಿಧ ಕಡೆಗಳಲ್ಲಿ ಮೋಡ ಕವಿದ ವಾತವರಣದೊಂದಿಗೆ ಮಳೆ ಸುರಿದಿದೆ.
ಕರಾವಳಿಯಲ್ಲಿ ಈ ಬಾರಿ ವಾಡಿಕೆಯ ಮಳೆಗಿಂತ ಶೇ 21ರಷ್ಟು ಮಳೆಯ ಕೊರತೆಯಾಗಿದ್ದರೂ ಈ ಬಾರಿ ಮುಂಗಾರು ಜೂನ್ 1ರೊಳಗೆ ಕೇರಳ ಪ್ರವೇಶಿಸಲಿರುವ ಕಾರಣ ಜೂನ್ ಪ್ರಥಮ ವಾರದಲ್ಲಿ ರಾಜ್ಯಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಗಳ ವರದಿ ತಿಳಿಸಿವೆ.