ಸಿಇಟಿ: ವಿದ್ಯೋದಯದ ಶ್ರವಣ್‌ಗೆ 13ನೇ ರ್ಯಾಂಕ್
Update: 2017-05-30 22:27 IST
ಉಡುಪಿ, ಮೇ 30: ಇಂದು ಪ್ರಕಟಗೊಂಡ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಉಡುಪಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪಿ.ಶ್ರವಣ್ ನಾಯಕ್ ಇಂಜಿನಿಯರಿಂಗ್‌ನಲ್ಲಿ 13ನೇ ಹಾಗೂ ಅತೀತ್ ಬಿ.ಶೆಟ್ಟಿ ಇಂಡಿಯನ್ ಮೆಡಿಸಿನ್‌ನಲ್ಲಿ 13ನೇ ರ್ಯಾಂಕ್ ಪಡೆದಿದ್ದಾರೆ.
ವಿದ್ಯೋದಯ ಟ್ರಸ್ಟ್‌ನ ಅಂಗಸಂಸ್ಥೆಯಾದ ವಿದ್ಯೋದಯ ಪದವಿಪೂರ್ವ ಕಾಲೇಜು 2017ನೇ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದೆ.
ಶ್ರವಣ್ ನಾಯಕ್ ಅಲ್ಲದೇ ಇಂಜಿನಿಯರಿಂಗ್ ವಿಭಾಗದಲ್ಲಿ ಕಾಲೇಜಿನ ಅತೀತ್ ಬಿ.ಶೆಟ್ಟಿ 50ನೇ, ರಿತಿಕಾ ಡಿ. 541ನೇ ಮತ್ತು ಗ್ರೀಷ್ಮಾ ಗಿರೀಶ್ 771ನೇ ರ್ಯಾಂಕ್ ಗಳಿಸಿದ್ದಾರೆ.
ಇಂಡಿಯನ್ ಮೆಡಿಸಿನ್‌ನಲ್ಲಿ ರಿತಿಕಾ ಡಿ. 20ನೇ, ಗ್ರೀಷ್ಮಾ ಗಿರೀಶ್ 355ನೇ, ಭವಾನಿ ಆರ್.ನಾಯಕ್ 666ನೇ, ಎ.ಶೈಲೇಶ್ ಭಟ್ 739ನೇ ಹಾಗೂ ಅನುಶ್ರೀ ವಿನಾಯಕ್ 923ನೇ ರ್ಯಾಂಕ್ ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಎ.ಲಕ್ಷ್ಮಿ ನಾರಾಯಣ ಛಾತ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.