12 ಒಪ್ಪಂದಗಳಿಗೆ ಭಾರತ, ಜರ್ಮನಿ ಸಹಿ
Update: 2017-05-30 22:31 IST
ಬರ್ಲಿನ್, ಮೇ 30: ಭಾರತ ಮತ್ತು ಜರ್ಮನಿಗಳು ಮಂಗಳವಾರ 12 ಒಪ್ಪಂದಗಳಿಗೆ ಸಹಿ ಹಾಕಿದವು. ಇದಕ್ಕೂ ಮುನ್ನ ಜರ್ಮನಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ನೇತೃತ್ವದಲ್ಲಿ ನಿಯೋಗ ಮಟ್ಟದಲ್ಲಿ ದ್ವಿಪಕ್ಷೀಯ ಮಾತುಕತೆಗಳು ನಡೆದವು.ಸಹಿ ಹಾಕಲಾದ ಒಪ್ಪಂದಗಳ ಪೈಕಿ ಒಂಬತ್ತು ಜಂಟಿ ಇಂಗಿತ ಘೋಷಣೆ (ಜೆಡಿಐ)ಗಳಾದರೆ, ಮುರು ತಿಳುವಳಿಕೆ ಪತ್ರಗಳಾಗಿವೆ.