×
Ad

ನದಿ ದಡದಲ್ಲಿ ವಾಸ್ತವ್ಯವಿರುವ ನಾಗರಿಕರಿಗೆ ಸೂಚನೆ

Update: 2017-05-30 23:55 IST

ಬಂಟ್ವಾಳ, ಮೇ 30: ಶಂಭೂರು ಎಎಂಆರ್ ಅಣೆಕಟ್ಟಿನಲ್ಲಿ ಜೂ.2ರಿಂದ ನೀರು ಶೇಖರಿಸಲಾಗುತ್ತಿದ್ದು, ನದಿನೀರಿನ ಮಟ್ಟದಲ್ಲಿ ಏರುವುದರಿಂದ ತೀರದ ಜನರು ಮುಂಜಾಗ್ರತೆ ವಹಿಸುವಂತೆ ಸಂಸ್ಥೆಯ ಮ್ಯಾನೇಜರ್ ಗುರುದಾಸ್ ತಿಳಿಸಿದ್ದಾರೆ.

ಶೇಖರಣೆಯಾದ ನೀರನ್ನು ವಿದ್ಯುಚ್ಚಕ್ತಿ ಉತ್ಪಾದನೆಗೆ ಬಳಸಿ ಬಳಿಕ ಆ ನೀರನ್ನು ಜೂ.3ರ ಅಥವಾ ನಂತರ ವಾಪಸ್ ನದಿಯ ಕೆಳಭಾಗಕ್ಕೆ ಹರಿಯ ಬಿಡಲಾಗುತ್ತದೆ. ಈ ಹಿನ್ನೆಲೆ ನದಿ ದಡದಲ್ಲಿ ವಾಸ್ತವ್ಯವಿರುವ ನಾಗರಿಕರು ತಮ ಸಾಕು ಪ್ರಾಣಿಗಳ ಬಗ್ಗೆಯೂ ನಿಗಾ ವಹಿಸುವಂತೆ ಕೋರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News