ಎಕ್ಸ್‌ಪರ್ಟ್ ಕಾಲೇಜಿಗೆ ಪ್ರಥಮ 10ರಲ್ಲಿ 4 ರ್ಯಾಂಕ್‌ಗಳು

Update: 2017-05-30 18:27 GMT

ಮಂಗಳೂರು, ಮೇ 30: ಪ್ರಸಕ್ತ ಸಾಲಿನ ಸಿಇಟಿ ಇಂಜಿನಿ ಯರಿಂಗ್ ಹಾಗೂ ಬಿ-ಾರ್ಮಾದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಪ್ರತೀಕ್ ಎಸ್.ನಾಯಕ್ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಈ ಬಾರಿಯ ಸಿಇಟಿಯ ಒಟ್ಟು ಐದು ವಿಭಾಗದ ಮೊದಲ 10 ರ್ಯಾಂಕ್‌ಗಳಲ್ಲಿ ನಾಲ್ಕು ರ್ಯಾಂಕ್, ಮೊದಲ 50 ರ್ಯಾಂಕ್‌ಗಳಲ್ಲಿ 27 ರ್ಯಾಂಕ್ ಹಾಗೂ ಮೊದಲ 100 ರ್ಯಾಂಕ್‌ಗಳಲ್ಲಿ 66 ರ್ಯಾಂಕ್‌ಗಳನ್ನು ಮಂಗಳೂರಿನ ಕೊಡಿಯಾಲ್‌ಬೈಲ್ ಹಾಗೂ ವಳಚ್ಚಿಲ್‌ನಲ್ಲಿರುವ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

ಅನ್ನಪೂರ್ಣಾ ಪಿ.(ಐಎಸ್‌ಎಂಎಚ್‌ನಲ್ಲಿ 6ನೆ, ಕೃಷಿಯಲ್ಲಿ 21, ಪಶು ವೈದ್ಯಕೀಯದಲ್ಲಿ 14), ಪಿ.ಯದು ತಿಲಕ್ (ಇಂಜಿನಿಯರಿಂಗ್‌ನಲ್ಲಿ 7ನೆ, ಬಿ-ಾರ್ಮಾದಲ್ಲಿ 18), ಸುಜಿತ್ ಎಸ್. (ಕೃಷಿಯಲ್ಲಿ 11, ಐಎಸ್‌ಎಂಎಚ್‌ನಲ್ಲಿ 21, ಪಶು ವೈದ್ಯಕೀಯದಲ್ಲಿ 22), ರಜತ್ ಜೈನ್ (ಪಶು ವೈದ್ಯಕೀಯ 19, ಕೃಷಿಯಲ್ಲಿ 37, ಐಎಸ್‌ಎಂಎಚ್ 48), ಪ್ರಿಯಾ ಎಸ್. (ಕೃಷಿಯಲ್ಲಿ 20, ಐಎಸ್‌ಎಂಎಚ್‌ನಲ್ಲಿ 46, ಪಶು ವೈದ್ಯಕೀಯದಲ್ಲಿ 45), ಪೂರ್ವಿ ಜಿ.ಆರ್. (ಇಂಜಿನಿಯರಿಂಗ್‌ನಲ್ಲಿ 23, ಬಿ-ಾರ್ಮಾದಲ್ಲಿ 27), ಪೂರ್ವ ಶಿಂಧೆ (ಕೃಷಿಯಲ್ಲಿ 25, ಐಎಸ್‌ಎಂಎಚ್ 33, ಪಶು ವೈದ್ಯಕೀಯದಲ್ಲಿ 48), ಜೋಶ್ನಾ ಶ್ರೀ ಎಂ. (ಐಎಸ್‌ಎಂಎಚ್‌ನಲ್ಲಿ 30, ಪಶು ವೈದ್ಯಕೀಯದಲ್ಲಿ 31), ಅಂಜನಾ ಆರ್. (ಪಶು ವೈದ್ಯಕೀಯದಲ್ಲಿ 34, ಐಎಸ್‌ಎಂಎಚ್‌ನಲ್ಲಿ 41, ಕೃಷಿಯಲ್ಲಿ 79), ಕಾರ್ತಿಕ್ ಎಂ. (ಇಂಜಿನಿಯರಿಂಗ್ 44, ಬಿ-ಾರ್ಮಾ 67), ಶಿವಾನಿ ಎಂ.ಡಿ. (ಪಶು ವೈದ್ಯಕೀಯದಲ್ಲಿ 40, ಐಎಸ್‌ಎಂಎಚ್ 47), ಆಕಾಂಕ್ಷ ಎಸ್.ಭಟ್ (ಐಎಸ್‌ಎಂಎಚ್ 52, ಕೃಷಿ 94, ಪಶು ವೈದ್ಯಕೀಯ 58), ಶ್ರವಣ್ ಕುಮಾರ್ ಶೆಟ್ಟಿ ಎನ್. (ಇಂಜಿನಿಯರಿಂಗ್ 54, ಕೃಷಿಯಲ್ಲಿ 84), ಶಿವಾನಿ ಭಟ್ ಎಲ್. (ಐಎಸ್‌ಎಂಎಚ್ 66, ಪಶು ವೈದ್ಯಕೀಯ 75) ರ್ಯಾಂಕ್ ಪಡೆದ ಪ್ರಮುಖ ವಿದ್ಯಾರ್ಥಿಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News