×
Ad

ಪತ್ರಕರ್ತೆಗೆ ಮುತ್ತುಕೊಟ್ಟ ಟೆನಿಸ್‌ ಆಟಗಾರ ಸಸ್ಪೆಂಡ್‌ !

Update: 2017-05-31 14:19 IST

ಪ್ಯಾರಿಸ್‌, ಮೇ 31: ತನ್ನ ಸಂದರ್ಶನ ನಡೆಸುತ್ತಿದ್ದ ಟಿವಿ ಚಾನಲೊಂದರ ಪತ್ರಕರ್ತೆಯನ್ನು ಬರಸೆಳೆದು ಕೊಂಡು ಮುತ್ತುಕೊಟ್ಟು ಆಕೆಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಫ್ರಾನ್ಸ್‌ನ ಯುವ ಟೆನಿಸ್‌ ಆಟಗಾರ  ಮಾಕ್ಸಿಮ್‌  ಹಮೊವ್‌  ಅವರನ್ನು ಫ್ರಾನ್ಸ್‌ ಟೆನಿಸ್‌ ಒಕ್ಕೂಟ(ಎಫ್‌ಎಫ್‌ಟಿ) ಅಮಾನತುಗೊಳಿಸಿದೆ.
ಸೋಮವಾರ  ಫ್ರೆಂಚ್‌ ಓಪನ್‌ ಪಂದ್ಯದ ಬಳಿಕ   ತನ್ನನ್ನು ಸಂದರ್ಶಿಸಲು ಬಂದಿದ್ದ ಟಿವಿ ಪತ್ರಕರ್ತೆ ಮಲೈ ಥಾಮಸ್‌ ಅವರಲ್ಲಿ ಆಟಗಾರ  ಮಾಕ್ಸಿಮ್‌ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಅವರ ಮಾನ್ಯತೆಯನ್ನು ಹಿಂಪಡೆಯಲು ಎಫ್‌ಎಫ್‌ಟಿ ನಿರ್ಧಾರ ಕೈಗೊಂಡಿದೆ.
ಸಂದರ್ಶನದ ವೇಳೆ ಪತ್ರಕರ್ತೆ ಥಾಮಸ್‌ ಅವರು ಆಟಗಾರ ಮಾಕ್ಸಿಮ್‌ ಬಳಿ ನಿಲ್ಲುತ್ತಾರೆ. ಆಗ ಹತ್ತಿರಕ್ಕೆ ಎಳೆದುಕೊಂಡ ಮಾಕ್ಸಿಮ್‌ ಅವರು ಥಾಮಸ್‌ಗೆ ಮುತ್ತುಕೊಡುತ್ತಾರೆ. ಆಕೆಯ ಪ್ರಶ್ನೆಗೆ ಉತ್ತರಿಸಿ ಎರಡನೆ ಬಾರಿ ಮುತ್ತುಕೊಡುವಾಗ ಥಾಮಸ್‌ ತಡೆಯುವ ಪ್ರಯತ್ನ ಮಾಡುತ್ತಾರೆ. ಮೂರನೇ ಬಾರಿ ಮಾಕ್ಸಿಮ್‌ ಬರಸೆಳೆದು ಚುಂಬಿಸುವಾಗ ಸಿಟ್ಟಿನಿಂದ ಆಕೆ ಆತನ ಎದೆಗೆ ಕೈಯಿಂದ ಗುದ್ದುವ ದೃಶ್ಯದ ವೀಡಿಯೋ ಇದೀಗ ವೈರಲ್‌ ಅಗಿದೆ.
ಆಟಗಾರನ ಕೃತ್ಯವನ್ನು ಎಫ್‌ಎಫ್‌ಟಿ ಖಂಡಿಸಿದ್ದು, ಪತ್ರಕರ್ತೆ ಮಲೈ ಥಾಮಸ್‌ ಅವರಲ್ಲಿ ಕ್ಷಮೆ ಯಾಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News