ಅಳೇಕಲ: 160 ಕುಟುಂಬಗಳಿಗೆ ರಮಝಾನ್ ಕಿಟ್ ವಿತರಣೆ

Update: 2017-05-31 10:52 GMT

ಉಳ್ಳಾಲ, ಮೇ 31: ಅಳೇಕಲ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 160 ಕುಟುಂಬಗಳಿಗೆ ಉಚಿತ ರಮಝಾನ್ ಕಿಟ್ಟನ್ನು ಟ್ರಸ್ಟ್ ಕಚೇರಿಯಲ್ಲಿ ವಿತರಿಸಲಾಯಿತು.

ಉಳ್ಳಾಲ ಸೈಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ರಮಝಾನ್ ತಿಂಗಳಲ್ಲಿ ದಾನ ಧರ್ಮ ನೀಡುವುದಕ್ಕೆ ವಿಶೇಷವಾದ ಮಹತ್ವವನ್ನು ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಕ್ರಮ ಮಾದರಿ ಎಂದು ಹೇಳಿದರು.

ಹಾಜಿ ಸೈಯದ್ ಯಹ್ಯಾ ತಂಙಳ್ ದುಆ ನೆರವೇರಿಸಿದರು. ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಮುಹಮ್ಮದ್ ತ್ವಾಹಾ   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  

ಉಳ್ಳಾಲ ಸೈಯದ್ ಮದನಿ ಕೇಂದ್ರ ಜುಮಾ ಮಸೀದಿ ಖತೀಬ್ ಶಮೀಮ್ ಸಖಾಫಿ, ಕೇಂದ್ರ ಜುಮಾ ಮಸೀದಿ ಸದಸ್ಯರಾದ ಮುಹಮ್ಮದ್ ಬಾವ, ಹಾಜಿ ಯು.ಎಚ್.ಮುಹಮ್ಮದ್ ಹಳೆಕೋಟೆ, ಆಸಿಫ್ ಅಬ್ದುಲ್ಲಾ, ಎ.ಎ.ಖಾದರ್,  ಇಬ್ರಾಹಿಂ ಖಾಸಿಮ್, ಉಪಾಧ್ಯಕ್ಷ ಯು.ಎಸ್.ಹನೀಫ್ ಹಾಜಿ, ಕಾರ್ಯದರ್ಶಿ  ಕೆ.ಎನ್.ಮುಹಮ್ಮದ್, ಕೋಶಾಧಿಕಾರಿ ಜಬ್ಬಾರ್, ಅಹ್ಮದ್ ಯು.ಎಚ್., ಸಿದ್ದೀಕ್, ಆರ್.ಎಂ. ರಹಮತುಲ್ಲಾ, ಯು.ಕೆ.ಇಬ್ರಾಹೀಂ, ಯು.ಎಸ್.ಹಸನಬ್ಬ, ಉಳ್ಳಾಲ ನಗರಸಭೆ ಸದಸ್ಯ ಯು.ಎ.ಇಸ್ಮಾಯಿಲ್ , ಎನ್.ಕೆ. ಅಹ್ಮದ್  ಉಪಸ್ಥಿತರಿದ್ದರು.

ಹಳೆಕೋಟೆ ಉರ್ದು  ಹಿರಿಯ ಪ್ರಾಥಮಿಕ ಮತ್ತು ಪ್ರೌಡ ಶಾಲೆಯ ಮುಖ್ಯ ಶಿಕ್ಷಕ ಕೆ.ಎಂ.ಕೆ.ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News