ಜಾನುವಾರು ಹತ್ಯೆ ನಿಯಮ ರೈತ ವಿರೋಧಿ, ಜನವಿರೋಧಿ: ಜಮಾಅತೆ ಇಸ್ಲಾಮಿ ಹಿಂದ್

Update: 2017-05-31 12:18 GMT

ನವದೆಹಲಿ, ಮೇ 31: ಕೇಂದ್ರ ಸರಕಾರವು ಜಾನುವಾರು ಹತ್ಯೆಯ ಹೊಸ ನಿಯಮಗಳನ್ನು ಹೊರಡಿಸಿದ್ದು ಅವುಗಳನ್ನು ಪಾಲಿಸುವಂತೆ ದೇಶದ ಜನತೆಯ ಮೇಲೆ ಒತ್ತಡ ಹೇರಿದಂತಿದೆ. ವಾಸ್ತವದಲ್ಲಿ ಈ ನಿಯಮಗಳು ರೈತ ವಿರೋಧಿ, ಜನವಿರೋಧಿ ಯಾಗಿವೆ ಮತ್ತು ದೇಶದ ಆರ್ಥಿಕತೆಯ ಮೇಲೆ ಗಂಭೀರ ಪ್ರಭಾವ ಬೀರುವಂತಹುಗಳಾಗಿವೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಲೀಮ್ ಇಂಜಿನಿಯರ್ ತೀವ್ರವಾಗಿ ಅಕ್ಷೇಪಿಸಿದ್ದಾರೆ.

ಸರಕಾರಕ್ಕೆ ಸಂಪೂರ್ಣ ಬೀಫ್ ನಿಷೇಧ ಮಾಡಲಾಗದೆಂಬುದು ತಿಳಿದಿದ್ದರೂ ಇಂತಹ ಹುಚ್ಚು ನಿರ್ಧಾರಕ್ಕೆ ಕೈ ಹಾಕಿದೆ. ಮುದಿ, ಗೊಡ್ಡು ದನ ಹಾಗೂ ಎಮ್ಮೆಗಳನ್ನು ವಧಿಸುವುದನ್ನು ಸರಕಾರ ಶಿಕ್ಷಾರ್ಹ ಅಪರಾಧವೆಂಬ ನಿಯಮಾವಳಿ ಹೊರಡಿಸುವುದರೊಂದಿಗೆ, ಹೈನುಗಾರಿಕೆಯ ಸುಮಾರು 40% ಆದಾಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ನುರಿತ ತಜ್ಞರು ತಿಳಿಸಿದ್ದಾರೆ. ಕೇವಲ 30% ಮಾಂಸಕ್ಕಾಗಿಯೂ ಮತ್ತು ಬಾಕಿ ಉಳಿದ 70% ಲೆದರ್, ಸೋಪ್, ಟೂತ್‌ಪೇಸ್ಟ್, ಬ್ರಷ್ ಗಳ ಉತ್ಪಾದನೆಗೆ ಮತ್ತು ಸರ್ಜಿಕಲ್ ಹೊಲಿಗೆಗಳಿಗಾಗಿ ಉಪಯೋಗಿಸಲ್ಪಡುತ್ತವೆ.

ಭಾರತ 2014-15 ರಲ್ಲಿ 30,000 ಕೋಟಿ ರೂ. ಮೌಲ್ಯದ ಎಮ್ಮೆ ಮಾಂಸವನ್ನು ರಫ್ತು ಮಾಡುವ ಮೂಲಕ ರಫ್ತಿನ ಒಂದಂಶ ಲಾಭ ಆರ್ಥಿಕ ರಂಗವು ಗಳಿಸಿದೆ. ಇನ್ನು ಚರ್ಮದ ಕಾರ್ಖಾನೆ ಗಳು ನಿರುದ್ಯೋಗ ದೊಂದಿಗೆ ಬೀದಿ ಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದು ವೇಳೆ ಹೊಸ ನಿಯಮಗಳನ್ನು ಸ್ವೀಕರಿಸಿದಲ್ಲಿ ಮತ್ತು ಮುಂದೊಂದು ದಿನ ಈ ನಿಯಮಗಳು ಆಡು ಕುರಿಗೂ ಬಂದು ನಿಲ್ಲುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಸರಕಾರವು ಈ ರೈತ ವಿರೋಧಿ, ಜನವಿರೋಧಿ ನಿಯಮಗಳನ್ನು ಹಿಂಪಡೆಯಬೇಕೆಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News