×
Ad

ರಾಷ್ಟ್ರಮಟ್ಟದ ಡ್ಯಾನ್ಸ್ ಸ್ಪರ್ಧೆ: ಪುತ್ತೂರು ತಂಡ ಪ್ರಥಮ

Update: 2017-05-31 20:12 IST

ಪುತ್ತೂರು, ಮೇ 31: ಪುತ್ತೂರಿನ ‘ಸ್ಟೆಪ್ ಮೇಕರ್ಸ್‌ ಡ್ಯಾನ್ಸ್ ಕ್ರೀವ್ಯ್ ವಾಂಟೆಡ್ ಬಾಯ್ಸ್’ ತಂಡವು ಮುಂಬೈ ಯ ಇನೋರ್ಬಿಟ್ ಮೊಲ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ‘ಇಂಡಿಯನ್ ಹಿಪ್ ಹೋಪ್ ಚಾಂಪಿಯನ್‌ಶಿಪ್ ’ ಡಾನ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಯುಎಸ್‌ಎ ಯ ಫಿಯೋನಿಕ್ಸ್‌ನಲ್ಲಿ ಆಗಸ್ಟ್ 6ರಿಂದ 12ರ ತನಕ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಹಿಪ್ ಹೋಪ್ ಚಾಂಪಿಯನ್‌ಶಿಫ್ ಡ್ಯಾನ್ಸ್ ಸ್ಪರ್ಧೆಗೆ ಆಯ್ಕೆಯಾಗಿದೆ.

ಪುತ್ತೂರಿನ ‘ಸ್ಟೆಪ್ ಮೇಕರ್ಸ್‌ ಡ್ಯಾನ್ಸ್ ಕ್ರೀವ್ಯ್ ವಾಂಟೆಡ್ ಬಾಯ್ಸ್’ ತಂಡದಲ್ಲಿ ಪವನ್ ಬಿ.ಎನ್, ಸಚಿನ್ ಎಂ.ಆರ್, ಅತೀಶ್ ಗೌಡ, ಸಾಯಿಕಿರಣ್, ದಿವಿರಾಜ್, ಗೋಡ್ವಿನ್, ಪ್ರಫುಲ್, ಅಕ್ಷಯ್, ಸೂರಜ್, ರಂಜಿತ್, ಅತೀಶ್ ಉಡುಪಿ, ಸುಜ್ಞಾ, ಅಪೂರ್ವ, ಕ್ರಿಶಲ್, ಹರ್ಷಲ್, ಚೈತ್ರ, ಸ್ನೇಹಾ, ಸೌಪರ್ಣಿಕ, ಶರಣ್ಯ , ರಾಕೇಶ್ , ಕೃತಿಕಾ  ಭಾಗವಹಿಸಿದ್ದರು.

ಒಟ್ಟು 9 ತಂಡಗಳು ಭಾಗವಹಿಸಿದ್ದ ರಾಷ್ಟ್ರಮಟ್ಟದ ಡ್ಯಾನ್ಸ್ ಸ್ಪರ್ಧೆಯಲ್ಲಿ 21 ಮಂದಿಯನ್ನೊಳಗೊಂಡ ಈ ತಂಡದ ಸದಸ್ಯರು ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನೊಳಗೊಂಡ ಚಾಂಪಿಯನ್‌ಶಿಪ್ ಪಡೆದುಕೊಂಡು ಅಂತಾ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.  

ಪವನ್ ಬಿ.ಎನ್ ಮತ್ತು ಅನಿಲ್ ನಾಯಕ್ ಅವರು ಡ್ಯಾನ್ಸ್ ತರಬೇತಿ ನೀಡಿದ್ದರು. ಪವನ್ ಬಿ.ಎನ್.ಅವರು ಸ್ಫರ್ಧೆಯಲ್ಲಿಯೂ ಡ್ಯಾನ್ಸ್‌ರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News