ರಸ್ತೆ ಅಪಘಾತ: ಇಬ್ಬರಿಗೆ ಗಾಯ
Update: 2017-05-31 20:40 IST
ಬಂಟ್ವಾಳ, ಮೇ 31: ದ್ವಿಚಕ್ರ ವಾಹನವೊಂದಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ತುಂಬೆಯಲ್ಲಿ ಬುಧವಾರ ನಡೆದಿದೆ.
ಮಾರಿಪಳ್ಳ ನಿವಾಸಿಗಳಾದ ಅಬೂಸಾಲಿ, ಕೌಸರ್ ಗಾಯಗೊಂಡವರು. ತುಂಬೆಯಿಂದ ಮಾರಿಪಲ್ಲ ಕಡೆಗೆ ಸಂಚಾರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ತುಂಬೆ ಬಗ್ದಾದ್ ಎಂಬಲ್ಲಿಂದ ಅಡ್ಡ ರಸ್ತೆಯಾಗಿ ಬಂದ ಪ್ರಕಾಶ್ ಎಂವರ ಕಾರು ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಘಟನೆಯಿಂದ ಅಬೂಸಾಲಿಯವರ ಕಾಲಿಗೆ ಹಾಗೂ ಕೌಸರ್‌ರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ.