ಅನಾಥಾಲಯಗಳಿಗೆ ಹಣಕಾಸಿನ ನೆರವು
Update: 2017-05-31 20:41 IST
ಮಂಗಳೂರು, ಮೇ 31: ಅಲ್ಪಸಂಖ್ಯಾತ ಮುಸ್ಲಿಂ, ಜೈನ್, ಬೌದ್ದ, ಪಾರ್ಸಿ ಮತ್ತು ಸಿಖ್ ಸಮುದಾಯಗಳ ಸಂಸ್ಥೆಯವರು ನಡೆಸುತ್ತಿರುವ ಅನಾಥಾಲಯ ವೃದ್ಧಾಶ್ರಮ ಎಚ್‌ಐವಿ/ಏಡ್ಸ್ ಸೋಂಕಿತ ರೋಗಿಗಳು ಮತ್ತು ಮಾನಸಿಕ ಹಾಗೂ ವಿಕಲಚೇತನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಅರ್ಹ ಸಂಸ್ಥೆಗಳಿಗೆ ಹಣಕಾಸಿನ ನೆರವನ್ನು ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯವರ ಕಚೇರಿ, ಮೌಲಾನಾ ಅಝಾದ್ ಭವನ, ಓಲ್ಡ್ ಕೆಂಟ್ ರಸ್ತೆ, ಪಾಂಡೇಶ್ವರ, ಮಂಗಳೂರು ಇಲ್ಲಿಂದ ಪಡೆಯಲು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಪ್ರಕಟನೆ ತಿಳಿಸಿದೆ.