ಮಿಲಾಗ್ರಿಸ್ ಕಾಲೇಜು ಪ್ರಾಂಶುಪಾಲರಾಗಿ ಡಾ.ವಿನ್ಸೆಂಟ್ ಆಳ್ವ

Update: 2017-05-31 15:24 GMT

ಉಡುಪಿ, ಮೇ 31: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಕಾಲೇಜಿನ ಆಂಗ್ಲ ವಿಭಾಗದ ಅಸೋಸಿಯೇಟ್ ಪ್ರೊಫೆೆಸರ್ ಡಾ.ವಿನ್ಸೆಂಟ್ ಆಳ್ವ ಆಯ್ಕೆಯಾಗಿದ್ದಾರೆ.

ಈಗಿನ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೊ ಮೇ 31ರಂದು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯಾಗಿರುವ ಕ್ಯಾಥೊಲಿಕ್ ಎಜುಕೇಶನಲ್ ಸೊಸೈಟಿ ಆಫ್ ಉಡುಪಿ ಡಯಾಸಿಸ್ ಈ ಆಯ್ಕೆ ಮಾಡಿದೆ.

ಡಾ.ವಿನ್ಸೆಂಟ್ ಆಳ್ವ ಮಂಡಿಸಿದ ‘ಇಂಟರ್‌ಪ್ರೆಟಿಂಗ್ ಆಂಡ್ ಇಂಟರೋ ಗೇಟಿಂಗ್ ಇಂಡಿಯನ್ ಟ್ರೆಡಿಷನ್ಸ್ : ಎ ಸ್ಟಡಿ ಆಫ್ ಫಿಕ್ಷನಲ್ ವರ್ಕ್ಸ್ ಆಫ್ ಗೀತಾ ಮೆಹ್ತಾ, ಶಶಿ ತರೂರ್ ಎಂಡ್ ರೊಹಿಂಟನ್ ಮಿಸ್ತ್ರಿ’ ಎಂಬ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿಯನ್ನು ನೀಡಿತ್ತು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಇವರು ಹಲವಾರು ಕಥೆ ಲೇಖನ, ಅಂಕಣ, ಕವನಗಳನ್ನು ಕೊಂಕಣಿ, ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಬರೆದಿದ್ದಾರೆ.

ಯು.ಆರ್.ಅನಂತಮೂರ್ತಿ ಯವರ ‘ಸಂಸ್ಕಾರ’ ಕಾದಂಬರಿಯನ್ನು ಕೊಂಕಣಿಗೆ ಅನುವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News