ಟ್ರಂಪ್‌ರ ಅರ್ಧ ಟ್ವಿಟರ್ ಅನುಯಾಯಿಗಳು ನಕಲಿ

Update: 2017-05-31 15:26 GMT

ವಾಶಿಂಗ್ಟನ್, ಮೇ 31: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ವೈಯಕ್ತಿಕ ಟ್ವಿಟರ್ ಖಾತೆಯು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ 30 ಲಕ್ಷ ನೂತನ ಅನುಯಾಯಿ (ಫಾಲೋವರ್ಸ್)ಗಳನ್ನು ಹೊಂದಲಿದೆ ಎಂದು ವರದಿಯೊಂದು ತಿಳಿಸಿದೆ.

ಆದರೆ, ಈ ಪೈಕಿ ಹೆಚ್ಚಿನ ಅನುಯಾಯಿಗಳು ನಕಲಿ ಎಂದು ಅದು ಹೇಳಿದೆ.

ಟ್ರಂಪ್‌ರ ನೂತನ ಅನುಯಾಯಿಗಳ ಪೈಕಿ ಹೆಚ್ಚಿನವರು ಮಾನವರಲ್ಲ, ರೋಬಟ್ ನೆಟ್‌ವರ್ಕ್‌ಗಳು. ‘ಬಾಟ್’ಗಳು ಎಂಬುದಾಗಿ ಕರೆಯಲ್ಪಡುವ ಈ ರೋಬಟ್‌ಗಳನ್ನು ಮಾನವ ಅನುಯಾಯಿಗಳಂತೆ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ, ವಾಸ್ತವವಾಗಿ ಅವುಗಳು ಕಂಪ್ಯೂಟರೀಕೃತ ಖಾತೆಗಳಷ್ಟೆ ಎಂದು ‘ಟ್ರಿಬ್ಯೂನ್’ನ ವರದಿಯೊಂದು ಹೇಳಿದೆ.

ಟ್ರಂಪ್‌ರ ಒಟ್ಟು 3.09 ಕೋಟಿ ಅನುಯಾಯಿಗಳ ಪೈಕಿ, 51 ಶೇ ಮಾತ್ರ ನಿಜ ಹಾಗೂ ಉಳಿದ 49 ಶೇ. ನಕಲಿ ಎಂದು ಟ್ವಿಟರ್ ಖಾತೆಗಳ ವಿಶ್ಲೇಷಣೆ ನಡೆಸುವ ವೆಬ್‌ಸೈಟ್ ಟ್ವಿಟರ್‌ಆಡಿಟ್.ಕಾಮ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News