ನಾಪತ್ತೆಯಾದ ವ್ಯಕ್ತಿ ಮೃತ್ಯು
Update: 2017-05-31 21:45 IST
ಕಾರ್ಕಳ, ಮೇ 29: ಹಿರಿಯಡ್ಕ ಸಮೀಪದ ಶಿರೂರು ಜಾರಂಗಾಯಿ ಎಂಬಲ್ಲಿಂದ ನಾಪತ್ತೆಯಾಗಿದ್ದ ಹರೀಶ್ (37) ಎಂಬವರ ಮೃತದೇಹವು ಮೇ 30ರಂದು ಬೆಳಗ್ಗೆ ಎರ್ಲಪಾಡಿ ಗ್ರಾಮ ಶೆಟ್ಟಿಬೆಟ್ಟು ಎಂಬಲ್ಲಿ ಪತ್ತೆಯಾಗಿದೆ.
ಮೇ 16ರಂದು ಜಾರಂಗಾಯಿ ಎಂಬಲ್ಲಿ ತನ್ನ ಕುಟುಂಬದ ಕೋಲಕ್ಕೆಂದು ಹೇಳಿ ಹೋಗಿ ನಾಪತ್ತೆಯಾಗಿದ್ದ ಹರೀಶ್ ಅವರ ಮೃತದೇಹವು ಹಾಡಿಯಲ್ಲಿ ಪತ್ತೆಯಾಗಿದೆ.
ಇವರು ಮದ್ಯದ ಅಮಲಿನಲ್ಲಿ ದಾರಿ ತಪ್ಪಿ ಹಾಡಿಯಲ್ಲಿ ಮಲಗಿದ್ದು, ಅಲ್ಲೆ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.