×
Ad

ಸಿಬಿಎಸ್‌ಇ: ಮಾಧವ ಕೃಪಾಗೆ ಶೇ.100 ಫಲಿತಾಂಶ

Update: 2017-05-31 21:54 IST
ಸೂರಜ್ ಕುಮಾರ್

ಮಣಿಪಾಲ, ಮೇ 31: ಈ ಬಾರಿಯ ಸಿಬಿಎಸ್‌ಇ 12ನೇ ತರಗತಿಯ ಪರೀಕ್ಷೆಯಲ್ಲಿ ಮಣಿಪಾಲದ ಮಾಧವ ಕೃಪಾ ಸ್ಕೂಲ್ ಶೇ.100 ಫಲಿತಾಂಶವನ್ನು ದಾಖಲಿಸಿದೆ. ವಿಜ್ಞಾನ ಮತ್ತು ಕಾಮರ್ಸ್ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲಾ 44 ಮಂದಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಶಾಲೆಯ 17 ಮಂದಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದರೆ, 16 ಮಂದಿ ಶೇ.80ರಿಂದ 90, ಎಂಟು ಮಂದಿ ಶೇ.70ರಿಂದ 80 ಹಾಗೂ ಮೂವರು ಶೇ.60ರಿಂದ 70 ಅಂಕಗಳನ್ನು ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ.97.4 ಅಂಕ (487) ಪಡೆದ ಸೂರಜ್ ಕುಮಾರ್ ಶಾಲೆಗೆ ಅಗ್ರಸ್ಥಾನಿಯಾಗಿದ್ದಾರೆ. ಇದೇ ವಿಭಾಗದಲ್ಲಿ ರಮತ್ಮಿಕ ಶೇ.97 ಹಾಗೂ ನತಾಷಾ ನಾಯಕ್ ಶೇ.96 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.

ಕಾಮರ್ಸ್ ವಿಭಾಗದಲ್ಲಿ ಶ್ರೀಕೃಷ್ಣ ಜಗದೀಶ್ ಪೈ ಶೇ.94.4, ಕೀರ್ತಿ ಶೇ.93.4 ಹಾಗೂ ಪ್ರೇರಣಾ ಶೇ.91.6 ಅಂಕ ಗಳಿಸಿದ್ದಾರೆ ಎಂದು ಪ್ರಾಂಶುಪಾಲೆ ಜೆಸ್ಸಿ ಆಂಡ್ರೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News