ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ದಾಳಿ

Update: 2017-05-31 16:41 GMT

ಉಡುಪಿ ಮೇ 31: ಉಡುಪಿ ಜಿಲ್ಲೆಯನ್ನು ಕೋಟ್ಪಾ-2003 ಕಾಯ್ದೆಯ ಉನ್ನತ ಅನುಷ್ಠಾನ ಜಿಲ್ಲೆಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ಘಟಕ ಹಾಗೂ ಕುಂದಾಪುರ ತಾಲೂಕು ಘಟಕ ಜಂಟಿಯಾಗಿ ಕುಂದಾಪುರ ನಗರ ಮತ್ತು ಕೋಟೇಶ್ವರ ಪ್ರದೇಶದ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ಮೇಲೆ ಹಾಗೂ ಹೋಟೇಲ್‌ಗಳ ಮೇಲೆ ದಾಳಿ ನಡೆಸಿ 23 ಪ್ರಕರಣ ದಾಖಲಿಸಿ 2,300 ರೂ. ದಂಡ ವಸೂಲಿ ಮಾಡಿದೆ.

ಅಲ್ಲದೇ ದಾಳಿಯಲ್ಲಿ ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನಗಳ ಪ್ರತ್ಯಕ್ಷ ಹಾಗೂ ಪರೋಕ್ಷ ಜಾಹೀರಾತು ನಾಮಫಲಕಗಳನ್ನು ಅಂಗಡಿ ಮಾಲಕರಿಂದ ತೆರವುಗೊಳಿಸಲಾಯಿತು.

 ದಾಳಿಯಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ವಾಸುದೇವ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಚಿದಾನಂದ್ ಸಂಜು, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಕೆ ಕೃಷ್ಣಪ್ಪ, ಆಹಾರ ಸುರಕ್ಷತಾ ಅಧಿಕಾರಿ ವೆಂಕಟೇಶ್, ಕುಂದಾಪುರದ ಹಿರಿಯ ಆರೋಗ್ಯ ನಿರೀಕ್ಷಕ ಸದಾನಂದ್, ಕಾರ್ಮಿಕ ಇಲಾಖೆ ನಿರೀಕ್ಷಕ ಸತ್ಯನಾರಾಯಣ್, ಶಿಕ್ಷಣ ಇಲಾಖೆಯ ದತ್ತಾತ್ರೇಯ, ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷ ಟಿ. ಶರತ್, ಕುಂದಾಪುರ ಪೋಲೀಸ್ ಠಾಣೆಯ ಎಎಸ್‌ಐ ನಾರಾಯಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News