×
Ad

ಪಾಕ್ ಹಸುಗೂಸಿನ ಆಕ್ರಂದನಕ್ಕೆ ಮಿಡಿದ ಭಾರತ

Update: 2017-06-01 09:44 IST

ಹೊಸದಿಲ್ಲಿ, ಜೂ.1: ಭಾರತ- ಪಾಕಿಸ್ತಾನ ನಡುವಿನ ಸಂಘರ್ಷ ತಾರಕಕ್ಕೇರಿದ ಬೆನ್ನಲ್ಲೇ, ಗಡಿಯಾಚೆಗಿನ ಹಸುಗೂಸಿನ ಆಕ್ರಂದನಕ್ಕೆ ಭಾರತದ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಸ್ಪಂದಿಸಿ ಮಾನವೀಯತೆ ಮೆರೆದ ಘಟನೆ ಬೆಳಕಿಗೆ ಬಂದಿದೆ.

ತೀವ್ರ ಹೃದಯ ಕಾಯಿಲೆಯಿಂದ ಬಳಲುತ್ತಿರುವ ಎರಡೂವರೆ ವರ್ಷದ ಮಗುವನ್ನು ಚಿಕಿತ್ಸೆಗಾಗಿ ಭಾರತಕ್ಕೆ ಕರೆತರಲು ಪಾಕಿಸ್ತಾನದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ವೈದ್ಯಕೀಯ ವೀಸಾ ಮನವಿಗೆ ಸುಷ್ಮಾ ಸ್ವರಾಜ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪಾಕಿಸ್ತಾನಿ ಪ್ರಜೆ ಟ್ವಿಟ್ಟರ್‌ನಲ್ಲಿ ತಮ್ಮ ಸಮಸ್ಯೆಯನ್ನು ಸುಷ್ಮಾ ಗಮನಕ್ಕೆ ತಂದ ಬಳಿಕ ಸಚಿವೆ ಈ ಸ್ಪಂದನೆ ನೀಡಿದ್ದಾರೆ.

"ಮಗು ಬಳಲಬಾರದು; ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಸಂಪರ್ಕಿಸಿ; ನಾವು ನಿಮಗೆ ವೈದ್ಯಕೀಯ ವೀಸಾ ನೀಡುತ್ತೇವೆ" ಎಂದು ಸುಷ್ಮಾ ಅಭಯ ನೀಡಿದ್ದಾರೆ. ಇದಕ್ಕೂ ಮುನ್ನ ರವಿಕುಮಾರ್ ಎಂಬುವವರು ಕೂಡಾ ಸುಷ್ಮಾ ಅವರಿಗೆ ಟ್ವೀಟ್ ಮಾಡಿ, ಈ ಹಸುಳೆಗೆ ತಕ್ಷಣದ ಚಿಕಿತ್ಸೆ ಅಗತ್ಯವಿದೆ. ಆದ್ದರಿಂದ ಮಧ್ಯಪ್ರವೇಶಿಸಿ ಎಂದು ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News