ಕಡಬ: ನದಿ ದಾಟುತ್ತಿದ್ದ ದಂಪತಿ ನೀರುಪಾಲು?
Update: 2017-06-01 10:34 IST
ಕಡಬ, ಜೂ.1: ಇಲ್ಲಿಗೆ ಸಮೀಪದ ಕುಂತೂರಿನಲ್ಲಿ ನಿನ್ನೆ ಸಂಜೆ ನದಿ ದಾಟುವ ಯತ್ನದಲ್ಲಿ ದಂಪತಿ ನಾಪತ್ತೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಚಾರ್ವಾಕ ನಿವಾಸಿ ಪರಮೇಶ್ವರ ಗೌಡ ಮತ್ತು ಅವರ ಪತ್ನಿ ಭವಾನಿ ನಾಪತ್ತೆಯಾದವರಾಗಿದ್ದಾರೆ.
ಇವರಿಬ್ಬರು ನಿನ್ನೆ ಸಂಜೆ ನಡೆದುಕೊಂಡೇ ಕುಮಾರಾಧಾರ ನದಿ ದಾಟಲು ಯತ್ನಿಸಿದ ವೇಳೆ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ತೆಪ್ಪ ಇಲ್ಲದ ಕಾರಣ ಇವರಿಬ್ಬರು ನದಿಗಿಳಿದು ನಡೆದಾಡುತ್ತಾ ದಾಟಲು ಯತ್ನಿಸಿದ್ದರೆನ್ನಲಾಗಿದೆ. ಈ ವೇಳೆ ಮುಳುಗಿ ನಾಪತ್ತೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ನಾಪತ್ತೆಯಾದವರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.