ಅಪಘಾತದಲ್ಲಿ ಕಳೆದುಕೊಂಡ ಹೆಬ್ಬೆರಳನ್ನು ಮರಳಿ ಪಡೆದ ಯುವಕ!
Update: 2017-06-01 18:43 IST
ಮಂಗಳೂರು, ಜೂ.1: ಒಂದು ವರ್ಷದ ಹಿಂದೆ ಸಂಭವಿಸಿದ ಅಪಘಾತವೊಂದರಲ್ಲಿ ಬಲಗೈ ಹೆಬ್ಬೆರಳನ್ನು ಕಳೆದುಕೊಂಡಿದ್ದ ಯುವಕ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರ ನೆರವಿನಿಂದ ಅದನ್ನು ಮರಳಿ ಪಡೆದುಕೊಂಡಿದ್ದಾರೆ.
ವೃತ್ತಿಯಲ್ಲಿ ವಾಹನ ಚಾಲಕರಾಗಿದ್ದ ಹೆಬ್ಬೆಹಳನ್ನು ಕಳೆದುಕೊಂಡಿದ್ದ ಯುವಕನಿಗೆ ಆಸ್ಪತ್ರೆಯ ಆತ್ರೋಪೆಡಿಕ್ಸ್ ವಿಭಾಗದಡಿಯ ಕೈ ಮತ್ತು ಮೈಕ್ರೋಸರ್ಜರಿ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ದೀರ್ಘಾವಧಿಯ ಶಸ್ತ್ರ ಚಿಕಿತ್ಸೆಯ ಮೂಲಕ ರೋಗಿಯ ಬಲಕಾಲಿನ ಎರಡನೆ ಬೆರನ್ನು ಕೈಯ ಹೊಸ ಹೆಬ್ಬೆರಳನ್ನಾಗಿ ಜೋಡಿಸಲಾಯಿತು.
ಈ ವಿನೂತನ ಹಾಗೂ ಅತ್ಯಾಧುನಿಕ ಶಸ್ತ್ರ ಚಿಕಿತ್ಸೆಯನ್ನು ಕೈ ಮತ್ತು ಮೈಕ್ರೋಸರ್ಜರಿ ಘಟಕದ ಮುಖ್ಯಸ್ಥ ಡಾ. ಲತೀಶ್ ಲಿಯೋ, ಅನಸ್ತಾಲಜಿ ವೈದ್ಯರಾದ ಡಾ. ಸಾಗರ್ ಎಸ್. ಮತ್ತು ಡಾ. ಹಿಲ್ಡಾ ನೇತೃತ್ವದ ವೈದ್ಯರ ತಂಡವು ನೆರವೇರಿಸಿತು.