×
Ad

ಮೇ.ಗೊಗೊಯ್‌ಗೆ ಪ್ರಶಂಸಾ ಪತ್ರ:ಎಚ್‌ಆರ್‌ಡಬ್ಲೂ ಟೀಕೆ

Update: 2017-06-01 19:32 IST

ನ್ಯೂಯಾರ್ಕ್,ಜೂ.1: ಕಾಶ್ಮೀರದಲ್ಲಿ ನಾಗರಿಕನೋರ್ವನನ್ನು ‘ಮಾನವ ಗುರಾಣಿ’ ಯಾಗಿ ಬಳಸಿದ್ದ ತನ್ನ ಅಧಿಕಾರಿ ಮೇ.ನಿತಿನ್ ಲೀತುಲ್ ಗೊಗೊಯ್‌ಗೆ ಪ್ರಶಂಸಾ ಪತ್ರವನ್ನು ನೀಡಿರುವುದಕ್ಕಾಗಿ ಭಾರತೀಯ ಸೇನೆಯನ್ನು ಟೀಕಿಸಿರುವ ಹ್ಯೂಮನ್ ರೈಟ್ಸ್ ವಾಚ್(ಎಚ್‌ಆರ್‌ಡಬ್ಲೂ), ಇಂತಹ ಕಾನೂನು ಬಾಹಿರ ಕೃತ್ಯವು ಭವಿಷ್ಯದಲ್ಲಿ ಭದ್ರತಾ ಪಡೆಗಳ ಮತ್ತು ಪ್ರತಿಭಟನಾಕಾರರ ಅಂಕೆ ಮೀರಿದ ಪುಂಡತನಕ್ಕೆ ಕಾರಣವಾಗುತ್ತದೆ ಎಂದು ಹೇಳಿದೆ.

ಗಂಭೀರ ಮಾನವ ಹಕ್ಕು ಉಲ್ಲಂಘನೆಗಳನ್ನೊಳಗೊಂಡ ಕ್ರಮಕ್ಕಾಗಿ ಅಧಿಕಾರಿಯನ್ನು ಭಾರತೀಯ ಸೇನೆಯು ಪುರಸ್ಕರಿಸಿರುವುದು ಅದರ ವಿಶ್ವಾಸಾರ್ಹತೆ ಮತ್ತು ಘನತೆಯನ್ನು ಕುಂದಿಸಿದೆ ಎಂದು ಎಚ್‌ಆರ್‌ಡಬ್ಲೂ ಹೇಳಿಕೆಯಲ್ಲಿ ತಿಳಿಸಿದೆ.

 ಕಾಶ್ಮೀರದಲ್ಲಿ ಸೈನಿಕರು ಕಠಿಣ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ,ನಿಜ. ಮಾನವ ಜೀವಗಳ ರಕ್ಷಣೆಗಾಗಿ ಅವರನ್ನು ಪುರಸ್ಕರಿಸಬೇಕು. ಆದರೆ ಇನ್ನೊಬ್ಬರನ್ನು ಅಪಾಯಕ್ಕೆ ತಳ್ಳಿ ಮತ್ತು ಅವರ ಹಕ್ಕುಗಳನ್ನು ಉಲ್ಲಂಘಿಸಿ ಜೀವರಕ್ಷಣೆಗಲ್ಲ ಎಂದು ಎಚ್‌ಆರ್‌ಡಬ್ಲೂ ದ ದಕ್ಷಿಣ ಏಷ್ಯಾ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಹೇಳಿದ್ದಾರೆ.

ಶ್ರೀನಗರ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಸಂದರ್ಭ ಮೇ.ಗೊಗೊಯ್ ಕಲ್ಲುತೂರಾಟಗಾರರಿಂದ ರಕ್ಷಣೆಯ ನೆಪದಲ್ಲಿ ಸೇನೆಯ ಜೀಪಿಗೆ ಕಾಶ್ಮೀರಿ ಯುವಕನೋರ್ವನನ್ನು ಕಟ್ಟಿ ಸುಮಾರು 25ಕಿ.ಮೀ.ಗಳಷ್ಟು ದೂರ ಪರೇಡ್ ನಡೆಸಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News