ಮೆಸ್ಕಾಂ ಸಹಾಯ ಅಭಿಯಂತರರಿಗೆ ಅಭಿನಂದನೆ

Update: 2017-06-01 14:14 GMT

ಮಂಗಳೂರು, ಜೂ.1: ಉಳ್ಳಾಲ ಭಾಗದಲ್ಲಿ ಮಳೆಗಾಲ ಆರಂಭಗೊಂಡಾಗ ವಿದ್ಯುತ್ ಸಮಸ್ಯೆ ಗಂಭೀರವಾಗಿ ಸಾರ್ವಜನಿಕರು ಮೆಸ್ಕಾಂಗೆ ಛೀಮಾರಿ ಹಾಕುತ್ತಿದ್ದರು. ಆದರೆ ದಯಾನಂದರ ಆಗಮನದ ಬಳಿಕ ಸಮಸ್ಯೆಗಳು ಪರಿಹಾರಗೊಂಡಿರುವುದು ಸಂತಸದ ವಿಚಾರ ಎಂದು ಮೇಲಗಂಡಿ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ, ಕಾಂಗ್ರೆಸ್ ಜಿಲ್ಲಾ ವಕ್ತಾರ ಫಾರೂಕ್ ಉಳ್ಳಾಲ್ ಹೇಳಿದರು.

ಉಳ್ಳಾಲ ಜನಹಿತ ಪೌರ ಸಮಿತಿ ಆಶ್ರಯದಲ್ಲಿ ಚೆಂಬುಗುಡ್ಡೆಯಲ್ಲಿರುವ ಮೆಸ್ಕಾಂ ಕಚೇರಿಯಲ್ಲಿ ಉಳ್ಳಾಲ ಉಪವಿಭಾಗದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಬಿ.ದಯಾನಂದರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.

ಜನಹಿತ ಪೌರ ಸಮಿತಿ ಅಧ್ಯಕ್ಷ ಬಾವಾ ಫಕೀರ್ ಸಾಬ್, ಕಾರ್ಯಾಧ್ಯಕ್ಷ ಕೆ.ಎಸ್.ಮೊಯಿದ್ದೀನ್, ಸಂಚಾಲಕ ಯು.ಬಿ.ಸಿದ್ದೀಕ್, ಉಪಾಧ್ಯಕ್ಷ ಮುಹಮ್ಮದ್ ಹಸನ್ ದೇರಳಕಟ್ಟೆ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹೀಂ ಮುಟ್ಟಿಕ್ಕಲ್, ಕೋಶಾಧಿಕಾರಿ ಮುಹಮ್ಮದ್ ಇಸ್ಮಾಯೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News