ಪಾಕ್‌ಗೆ ಬ್ರಿಟನ್‌ನಿಂದ 7 ಸೀ ಕಿಂಗ್ ಹೆಲಿಕಾಪ್ಟರ್

Update: 2017-06-01 15:01 GMT

ಇಸ್ಲಾಮಾಬಾದ್, ಜೂ. 1: ತನ್ನ ನೌಕಾಪಡೆಗಾಗಿ ಪಾಕಿಸ್ತಾನ ಕಳೆದ ವರ್ಷ ಬೇಡಿಕೆ ಸಲ್ಲಿಸಿದ್ದ ಏಳು ವೆಸ್ಟ್‌ಲ್ಯಾಂಡ್ ಸೀ ಕಿಂಗ್ ಬಹೂಪಯೋಗಿ ಹೆಲಿಕಾಪ್ಟರ್‌ಗಳನ್ನು ಬ್ರಿಟನ್ ಹಸ್ತಾಂತರಿಸಿದೆ.

 ಬ್ರಿಟನ್‌ನಲ್ಲಿ ಮೇ 24ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಹೆಲಿಕಾಪ್ಟರ್‌ಗಳನ್ನು ಅಧಿಕೃತವಾಗಿ ಪೂರೈಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಹೈಕಮಿಶನರ್ ಸೈಯದ್ ಇಬ್ನ್ ಅಬ್ಬಾಸ್ ಮತ್ತು ಬ್ರಿಟನ್ ರಕ್ಷಣಾ ಸಚಿವಾಲಯದ ಕ್ರಿಸ್ಟೋಫರ್ ಬಾಬ್ ರಿಚರ್ಡ್‌ಸನ್ ಪಾಲ್ಗೊಂಡಿದ್ದರು.

ಹೆಲಿಕಾಪ್ಟರ್‌ಗಳನ್ನು ಸುಸಜ್ಜಿತಗೊಳಿಸಿ ಈ ವರ್ಷದ ಕೊನೆಯಲ್ಲಿ ಪಾಕಿಸ್ತಾನಕ್ಕೆ ಕಳುಹಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News