×
Ad

ಬಿಪಿಎಲ್ ಪಡಿತರ ಚೀಟಿಗೆ ವಿದ್ಯುತ್ ಬಳಕೆಯ ಮಾನದಂಡ ರದ್ದು -ಯು.ಟಿ.ಖಾದರ್

Update: 2017-06-01 21:15 IST

ಮಂಗಳೂರು,ಜೂನ್.1:ಪಡಿತರಚೀಟಿ ವರ್ಗೀಕರಣಕ್ಕೆ (ಎಪಿಲ್ -ಬಿಪಿಎಲ್) ಇದ್ದ ಕರೆಂಟ್ ಬಳಕೆಯ ಮಾನದಂಡವನ್ನು ರದ್ದು ಪಡಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

 ಈ ಹಿಂದೆ ಬಿಪಿಎಲ್ ಪಡಿತರಚೀಟಿ ಪಡೆಯಲು ಮಾಸಿಕ 150ವಿದ್ಯುತ್ ಯೂನಿಟ್ ಒಳಗಿನ ಬಳಕೆದಾರರಿಗೆ ಮಾತ್ರ ಸೀಮಿತವಾಗಿತ್ತು.ಉಳಿದವರನ್ನು ಎಪಿಲ್‌ಗೆ ಸೇರಿಸಲಾಗಿತ್ತು.ಆದರೆ ಮನೆಯಲ್ಲಿ ಸಮಾರಂಭದ ಸಂದರ್ಭದಲ್ಲಿ ಹೆಚ್ಚು ವಿದ್ಯುತ್ ಬಳಕೆ ಮಾಡಿದ ತಕ್ಷಣ ಈ ಮಾನದಂಡದ ಪ್ರಕಾರ ಬಿಪಿಎಲ್ ಕಾರ್ಡ್ ಪಡೆಯಲು ಸಮಸ್ಯೆಯಾಗುತ್ತಿದೆ ಈ ಹಿನ್ನೆಲೆಯಲ್ಲಿ ಮುಂದೆ ಬಿಪಿಎಲ್ ಪಡಿತರಚೀಟಿ ಪಡೆಯಲು ಈ ವಿದ್ಯುತ್ ಬಳಕೆಯ ಆಧಾರವನ್ನು ಸಂಪೂರ್ಣ ಕೈ ಬಿಡಲಾಗುವುದು ರಾಜ್ಯ ಸಚಿವ ಸಂಪುಟ ಎಂದು ಸಚಿವ ಖಾದರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಅನಿಲ ಭಾಗ್ಯ ಯೋಜನೆ ಜಾರಿ:-ಕೇಂದ್ರ ಸರಕಾರ ಮೂರು ವರ್ಷವಾದರೂ ಉಜ್ವಲ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿ ಮಾಡಲು ಆಸಕ್ತಿ ವಹಿಸದೆ ಇರುವ ಕಾರಣ ಕರ್ನಾಟಕ ಬಡವರಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಅನಿಲ ಭಾಗ್ಯ ಯೋಜನೆಯನ್ನು ಜಾರಿಗೆ ತರಲಿದೆ.ಇದರಿಂದ ಅಡುಗೆ ಅನಿಲ ಸಂಪರ್ಕ ಇಲ್ಲದ ಬಳಕೆದಾರರಿಗೆ ಉಚಿತವಾಗಿ ಅಡುಗೆ ಅನಿಲದ ಸಂಪರ್ಕ ಠೇವಣಿ,ಗ್ಯಾಸ್ ಸ್ಟೌವ್,ಗ್ಯಾಸ್ ಸಿಲಿಂಡರ್ ಸೇರಿದಂತೆ ಸುಮಾರು 3,500 ರೂ ಮೊತ್ತದ ಸೌಲಭ್ಯ ದೊರಕಲಿದೆ ಎಂದು ಖಾದರ್ ತಿಳಿಸಿದ್ದಾರೆ.

    ಗೋಹತ್ಯೆ ನಿಷೇಧ ನೀತಿಯಲ್ಲಿ ಗೊಂದಲವಿದೆ:-ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿರುವ ಗೋಹತ್ಯೆ ನಿಷೇಧ ನೀತಿಯಲ್ಲಿ ಗೊಂದಲವಿದೆ.ಈ ಬಗ್ಗೆ ಸರಕಾರ ಎಡ್ವೋಕೇಟ್ ಜನರಲ್‌ರವರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದೆ.ಗೋಹತ್ಯೆ ನಿಷೇಧದ ವಿಚಾರದಲ್ಲಿ ಸರಕಾರ ಎಲ್ಲಾ ಜನರ ಭಾವನೆಯನ್ನು ಗೌರವಿಸುತ್ತದೆ.ಈ ಹಿಂದಿನ 1960ರ ಪ್ರಾಣಿ ಹಿಂಸಾ ತಡೆ ಕಾಯಿದೆಯಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡಿ ಕೊಲ್ಲಲು ಅವಕಾಶವಿರಲ್ಲ.ಆದರೆ ಇದೇ ಸಂದರ್ಭದಲ್ಲಿ ನಿರುಪಯುಕ್ತವಾದ ದನವನ್ನು ಸೂಕ್ತ ಕ್ರಮಗಳೊಂದಿಗೆ ಏನು ಮಾಡಬೇಕೆಂದು ಸೂಚಿಸಲಾಗಿತ್ತು.ಆದರೆ ಪ್ರಸಕ್ತ ಗೋಹತ್ಯೆ ನಿಷೇಧ ನೀತಿಯಲ್ಲಿ ಗೋಮಾಂಸ ಸೇವನೆಗೆ ನಿಷೇಧ ಹೇರಲಾಗಿಲ್ಲ.

ನಿರುಪಯುಕ್ತ ದನಗಳ ನ್ನು ಏನು ಮಾಡಬೇಕೆಂದು ತಿಳಿಸಿಲ್ಲ.ಇನ್ನೊಂದು ಕಡೆ ದನದ ಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವ ಕಂಪೆನಿಗಳಿಗೆ ವಿನಾಯಿತಿ,ಅವಕಾಶವನ್ನು ಬಿಜೆಪಿ ನೀಡಿದೆ.ದೇಶದಲ್ಲಿ ಬಿಜೆಪಿ ಈ ರೀತಿಯ ನಿಲುವಿನಿಂಧ ಗೊಂದಲ ಸೃಷ್ಟಿಸುತ್ತಿದೆ .ಬಿಜೆಪಿಗೆ ಸಾಮರ್ಥ್ಯವಿದ್ದರೆ ಕೋಟ್ಯಾಂತರ ರೂಪಾಯಿಗಳ ಬೀಫ್‌ನ್ನು ವಿದೇಶಕ್ಕೆ ರಫ್ತು ಮಾಡುವ ಕಂಪೆನಿಯನ್ನು ಏಕೆ ನಿಲ್ಲಿಸಿಲ್ಲ ? .ಈ ನೀತಿಯ ಇದರ ಹಿಂದೆ ಬಿಜೆಪಿಯ ರಾಜಕೀಯ ಇದೆ ಎಂದು ಯು.ಟಿ.ಖಾದರ್ ಟೀಕಿಸಿದ್ದಾರೆ.

 ಎಂಡೋ ಸಂತ್ರಸ್ಥರ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಿಲ್ಲ:-ಆದರೆ ಈ ಹಿಂದಿನ ಸರಕಾರ ಎಂಡೋ ಸಂತ್ರಸ್ಥರಿಗೆ ಪರಿಹಾರವಾಗಿ ಸರಕಾರದಿಂದ 5ಕೋಟಿ ಬಿಡುಗಡೆ ಮಾಡಿ ಕೆಲವರಿಗೆ ಮಾತ್ರ ಹಂಚಿದ್ದಾರೆ.ಇದು ಸರಿಯಾದ ಕ್ರಮವಲ್ಲ ಇದರಿಂದ ಎಂಡೋ ಪೀಡಿತ ಕುಟುಂಬಗಳಲ್ಲಿ ಸಾಕಷ್ಟು ಕುಂಟುಂಬಗಳು ಯಾವೂದೇ ನೆರವು ದೊರೆಯದೆ ತೊಂದರೆಗೆ ಸಿಲುಕಿದ್ದರು.ಈ ರೀತಿಯ ತಾರತಮ್ಯ ಆಗಬಾರದು ಎಂದು ಮೊದಲು ಎಂಡೋಪೀಡಿತರು ಎಷ್ಟಿದ್ದಾರೆ ಎಂದು ಸಮೀಕ್ಷೆ ನಡೆಸಿದಾಗ ಜಿಲ್ಲೆಯಲ್ಲಿ ಯಾವುದೇ ಸಹಾಯ ದೊರೆಯದೆ ಇದ್ದ ದೊಡ್ಡ ಪ್ರಮಾಣದ ಎಂಡೋಪೀಡಿತರನ್ನು ಗುರುತಿಸಲು ಸಾಧ್ಯವಾಯಿತು.

ಬಳಿಕ ಅವರಿಗೆ ಪ್ರತಿ ತಿಂಗಳು ಆರ್ಥಿಕ ನೆರವು,ಎಲ್ಲರಿಗೂ ಗುರುತಿನ ಚೀಟಿ ನೀಡಿ,ದೊಡ್ಡ ಮಟ್ಟದ ಚಿಕಿತ್ಸೆ ಬೇಕಾದವರಿಗೆ ಜಿಲ್ಲೆಯ 11 ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲು ಕಾರ್ಡ್ ವಿತರಿಸಲಾಯಿತು. ಶೀಘ್ರದಲ್ಲಿ ಉಜಿರೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ಎಂಡೋಸಂತ್ರಸ್ಥರ ಪುನರ್ವಸತಿ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News