×
Ad

ಬಸ್-ಟೆಂಪೋ ಮುಖಾಮುಖಿ ಢಿಕ್ಕಿ

Update: 2017-06-01 21:28 IST

ಬೆಳ್ತಂಗಡಿ, ಜೂ.1: ಖಾಸಗಿ ಬಸ್ ಮತ್ತು 407 ಟೆಂಪೋ ಮುಖಾಮುಖಿ ಢಿಕ್ಕಿಯಾದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾವರದಲ್ಲಿ ಗುರುವಾರ ಸಂಭವಿಸಿದೆ.

ನಾವರ ಗ್ರಾಮದ ಹಿರಂತೋಡುವಿನಲ್ಲಿ ಕಾರ್ಕಳದಿಂದ ನಾರಾವಿ ಮಾರ್ಗವಾಗಿ ಬೆಳ್ತಂಗಡಿಗೆ ತೆರಳುತ್ತಿದ್ದ ಖಾಸಗಿ ಬಸ್ ಮತ್ತು 407 ಟೆಂಪೋ ಮಧ್ಯೆ ಅಪಘಾತ ಸಂಭವಿಸಿದ್ದು, ಬಳಿಕ ಟೆಂಪೋ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿಯೊಡೆದಿದೆ.

ಘಟನೆಯಿಂದ ವಿದ್ಯುತ್ ಕಂಬ ತುಂಡಾಗಿದೆ. ಮೆಸ್ಕಾಂಗೆ ಅಂದಾಜು ರೂ. 25,000 ನಷ್ಟ ಉಂಟಾಗಿದ್ದು, ವೇಣೂರು ಪೊಲೀಸರಿಗೆ ಟೆಂಪೋ ಚಾಲಕನ ವಿರುದ್ಧ ದೂರು ನೀಡಿದ್ದಾರೆ.

ಘಟನೆಯಿಂದ ಬಸ್‌ನ ಮುಂಭಾಗವೂ ಸಂಪೂರ್ಣ ಜಖಂಗೊಂಡಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ದೊರಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News