ಹ್ಯಾಕಿಂಗ್‌ನಲ್ಲಿ ರಶ್ಯ ಸರಕಾರ ಭಾಗಿಯಲ್ಲ 'ದೇಶಭಕ್ತ' ರಶ್ಯನ್ನರು ಕನ್ನ ಹಾಕಿರಬಹುದು: ಪುಟಿನ್

Update: 2017-06-01 16:50 GMT

ಸೇಂಟ್ ಪೀಟರ್ಸ್‌ಬರ್ಗ್, ಜೂ. 1: ಇಂಟರ್‌ನೆಟ್‌ಗೆ ಕನ್ನ ಹಾಕುವ ಕೆಲಸದಲ್ಲಿ ರಶ್ಯ ಸರಕಾರ ಯಾವತ್ತೂ ತೊಡಗಿಸಿಕೊಂಡಿಲ್ಲ ಎಂದು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಹೇಳಿದ್ದಾರೆ ಹಾಗೂ ಅಮೆರಿಕ ಅಥವಾ ಯುರೋಪ್‌ನ ಚುನಾವಣಾ ಫಲಿತಾಂಶದ ಮೇಲೆ ಕನ್ನಗಾರರು ಪ್ರಭಾವ ಬೀರಬಹುದು ಎಂಬ ಆರೋಪಗಳನ್ನು ತಿರಸ್ಕರಿಸಿದ್ದಾರೆ.

ಆದಾಗ್ಯೂ, ರಶ್ಯ ಮತ್ತು ಪಶ್ಚಿಮದ ದೇಶಗಳ ಬಾಂಧವ್ಯದಲಿ ಬಿರುಕು ಹುಟ್ಟಿರುವ ಇಂದಿನ ಸಂದರ್ಭದಲ್ಲಿ ಕೆಲವು 'ದೇಶಭಕ್ತ' ಕನ್ನಗಾರರು ಕೆಲವು ದಾಳಿಗಳನ್ನು ನಡೆಸಿರುವ ಸಾಧ್ಯತೆಯನ್ನು ಅವರು ಒಪ್ಪಿಕೊಂಡರು.

ಪ್ರಮುಖ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳ ಹಿರಿಯ ಸಂಪಾದಕರ ಸಭೆಯಲ್ಲಿ ಮಾತನಾಡಿದ ಅವರು, ರಶ್ಯದ ಹೆಸರಿಗೆ ಕಳಂಕ ತರಲು ಕೆಲವರು ಕನ್ನ ಹಾಕಿರಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News