×
Ad

ಸಂಸದೀಯ ಬ್ರಿಟನ್ ಸಾರ್ವತ್ರಿಕ ಚುನಾವಣೆ: ವೀಕ್ಷಕರಾಗಿ ಸಂಸದೆ ಶೋಭಾ ಕರಂದ್ಲಾಜೆ ಆಯ್ಕೆ

Update: 2017-06-01 22:30 IST

ಉಡುಪಿ, ಜೂ.1: ಬ್ರಿಟನ್ (ಯುನೈಟೆಡ್ ಕಿಂಗ್‌ಡಮ್) ದೇಶದ ಸಾರ್ವತ್ರಿಕ ಚುನಾವಣೆ-2017ಕ್ಕೆ ಭಾರತ ದೇಶದಿಂದ ಅಧಿಕೃತ ಸಂಸದೀಯ ವೀಕ್ಷಕರಾಗಿ ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಆಯ್ಕೆಯಾಗಿದ್ದಾರೆ.

 ಜಗತ್ತಿನ ಹಳೆಯ ಪ್ರಜಾಪ್ರಭುತ್ವಗಳಲ್ಲೊಂದಾದ ಗ್ರೇಟ್ ಬ್ರಿಟನ್‌ನ ಸಾರ್ವತ್ರಿಕ ಚುನಾವಣೆ ಜೂ. 8ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ಎನಿಸಿದ ಭಾರತ ದೇಶದಿಂದ ಅಧಿಕೃತ ಸಂಸದೀಯ ವೀಕ್ಷಕರಾಗಿ ಸಂಸದೆ ಶೋಭಾ ಕರಂದ್ಲಾಜೆ ಜೂ.3ರಿಂದ 10ರವರೆಗೆ ಆ ದೇಶದ ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವರು.

 ಯುಕೆ ಇಲೆಕ್ಷನ್ ಎಸೆಸ್‌ಮೆಂಟ್ ಮಿಷನ್ ಯೋಜನೆಯಡಿ ಭಾರತ ದೇಶದಿಂದ ಅಧಿಕೃತ ಸಂಸದೀಯ ವೀಕ್ಷಕರಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಶಿಫಾರಸ್ಸಿನಂತೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News