×
Ad

ಅಲೆವೂರು: ಗ್ರಾಮದ 40 ವರ್ಷಗಳ ಸೇತುವೆ ಕನಸು ನನಸು

Update: 2017-06-01 23:35 IST

ಉಡುಪಿ, ಜೂ.1: ಅಲೆವೂರು ಗ್ರಾಮದ ಜನರ ಬಹುದಿನಗಳ ಕನಸಾದ ನೈಲಪಾದೆ ಕಲ್ಮಂಜೆ ಸೇತುವೆಗೆ 1.50 ಕೋಟಿ ರೂ. ಮಂಜೂರಾಗಿದೆ ಎಂದು ಕಾಪು ಶಾಸಕ ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.

ಅಲೆವೂರು ಗ್ರಾಪಂ ವ್ಯಾಪ್ತಿಯಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿ ಗಳಿಗೆ ಗುದ್ದಲಿ ಪೂಜೆ, ಕೆಲವು ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಲೆವೂರು ಗ್ರಾಪಂ ವ್ಯಾಪ್ತಿಯಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿ ಗಳಿಗೆ ಗುದ್ದಲಿ ಪೂಜೆ, ಕೆಲವು ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನೈಲಪಾದೆ ಸೇತುವೆ ಶಿಥಿಲಗೊಂಡು ಹಲವು ದಶಕಗಳು ಕಳೆದಿದ್ದರೂ ದುರಸ್ಥಿ ಗೊಳ್ಳದೇ ಕುಸಿಯುವ ಭೀತಿಯಲ್ಲಿತ್ತು. ಈ ಸೇತುವೆ ಮೂಡುಬೆಳ್ಳೆ, ಕಲ್ಮಂಜೆ ಭಾಗದ ಜನರಿಗೆ ಮಣಿಪಾಲ ಮತ್ತು ಉಡುಪಿಗೆ ಸಂಚರಿಸಲು ಸಮೀಪದ ದಾರಿಯಾಗಿದೆ. ಶಿಥಿಲಗೊಂಡ ಸೇತುವೆ ಮೇಲೆ ದ್ವಿಚಕ್ರವಾಹನದಲ್ಲಿ ಚಲಿಸುವುದು ಕಷ್ಟವಾಗಿತ್ತು.

 ಹಲವು ವರ್ಷಗಳ ಸತತ ಪ್ರಯತ್ನದ ಬಳಿಕ ಇದೀಗ ಈ ಭಾಗದ ಜನರ ಮನವಿಗೆ ಸ್ಪಂದಿಸಿದ ಶಾಸಕರು 150 ಲಕ್ಷ ರೂ ವೆಚ್ಚದ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿರುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು.

ಕಾಪು ವಿಧಾನಸಭಾ ವ್ಯಾಪ್ತಿಯಲ್ಲಿ 25 ಕೆರೆಗಳ ಅಭಿವೃದ್ಧಿ, 30 ಕೋಟಿ ವೆಚ್ಚದ ವೆಂಟೆಡ್‌ಡ್ಯಾಮ್, ಒಂದು ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಸೊರಕೆ ಈ ಸಂದರ್ಭ ತಿಳಿಸಿದರು.
 

ಗಾಂಧಿ ಪಥ-ಗ್ರಾಮ ಪಥ ಯೋಜನೆಯಡಿ ಅಲೆವೂರು-ಮಣಿಪಾಲ ಕ್ರಾಸ್‌ನ ಎರಡು ಕಿ.ಮೀ. ರಸ್ತೆಯನ್ನು 1.84 ಕೋಟಿ ರೂ. ವೆಚ್ಚದಲ್ಲಿ ಅಗಲೀಕರಣಗೊಳಿಸುವ ಕಾಮಗಾರಿಗೆ ವಿನಯಕುಮಾರ್ ಸೊರಕೆ ಗುದ್ದಲಿ ಪೂಜೆ ನೆರವೆರಿಸಿದರು.

 ಈ ಸಂದರ್ಭ ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್, ಮಾಜಿ ಅಧ್ಯಕ್ಷ ಹರೀಶ ಕಿಣಿ, ಸದಸ್ಯರಾದ ಪ್ರಭಾವತಿ ಮೆನನ್, ಸುಧಾಕರ್ ಪೂಜಾರಿ, ಪುಷ್ಪಅಂಚನ್, ಸ್ವಾತಿ ಪ್ರಭು, ತಾಪಂ ಮಾಜಿ ಸದಸ್ಯ ಪ್ರವೀಣ್ ಶೆಟ್ಟಿ, ಸ್ಥಳೀಯರಾದ ಅಲೆವೂರು ಶೇಖರ್ ಪೂಜಾರಿ,ರಾಘವ ಪೂಜಾರಿ, ಯತೀಶ್ ಪೂಜಾರಿ, ಜಯ ಸೇರಿಗಾರ್, ಯು.ಟಿ.ಬಂಗೇರ, ಕೃಷ್ಣ ಪೂಜಾರಿ, ಶಾರದ ನಾಯ್ಕ , ಕೃಷ್ಣ ಅಮಿನ್ ಸೆಲ್ವ, ಗೋಪಾಲ್, ರೂಪೇಶ ಪಿಡಿಒ ಬುಧ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News