ಓವರ್‌ಟೈಮ್ ಭತ್ತೆ ಬಾಕಿ: ಶಾಲಾ ಬಸ್‌ಗೆ ಬೆಂಕಿ ಕೊಟ್ಟ ಚಾಲಕ: 11 ಮಕ್ಕಳು ಸಾವು

Update: 2017-06-02 14:23 GMT

ಬೀಜಿಂಗ್, ಜೂ. 2: ಚೀನಾದ ಶಾಲಾ ಬಸ್‌ನ ಚಾಲಕನೊಬ್ಬ ತನ್ನದೇ ಬಸ್ಸಿಗೆ ಬೆಂಕಿ ಕೊಟ್ಟಿದ್ದು 11 ಮಕ್ಕಳು ಮೃತಪಟ್ಟಿದ್ದಾರೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ಶುಕ್ರವಾರ ವರದಿ ಮಾಡಿದೆ.

ಮೃತ ಮಕ್ಕಳ ಪೈಕಿ ಐವರು ದಕ್ಷಿಣ ಕೊರಿಯನ್ನರು ಮತ್ತು ಆರು ಚೀನೀಯರು.

ತನಗೆ ಸಿಗಬೇಕಾಗಿದ್ದ ಓವರ್‌ಟೈಮ್ ಮತ್ತು ರಾತ್ರಿ ಪಾಳಿಯ ವೇತನವನ್ನು ಕಡಿತಗೊಳಿಸಿರುವ ವಿಷಯದಲ್ಲಿ ಕೋಪಗೊಂಡಿದ್ದ ಚಾಲಕ ಈ ಹೇಯ ಕೃತ್ಯಕ್ಕೆ ಕೈ ಹಾಕಿರಬಹುದು ಎಂದು ಹೇಳಲಾಗಿದೆ.

ಈ ಘಟನೆ ಮೇ 9ರಂದು ನಡೆದಿತ್ತು. ಶಾಂಗ್‌ಡಾಂಗ್ ಪ್ರಾಂತದ ಸುರಂಗ ಮಾರ್ಗವೊಂದರಲ್ಲಿ ತಡೆಗೋಡೆಗೆ ಬಸ್ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿದ್ದು ಮೂರರಿಂದ ಆರು ವರ್ಷದ ನಡುವಿನ 11 ಮಕ್ಕಳು ಮತ್ತು ಚಾಲಕ ಸುಟ್ಟು ಹೋಗಿದ್ದಾರೆ ಎಂದು ಅಂದು ಹೇಳಲಾಗಿತ್ತು.

ಆದರೆ, ಬೆಂಕಿಯನ್ನು ಚಾಲಕನೇ ಕೊಟ್ಟಿದ್ದಾನೆ ಎಂಬುದಾಗಿ ತನ್ನ ಇತ್ತೀಚಿನ ವರದಿಯಲ್ಲಿ ಕ್ಸಿನುವಾ ಹೇಳಿದೆ.

‘‘ಚಾಲಕನ ಆಸನದ ಸಮೀಪ ನೆಲದಲ್ಲಿ ಬೆಂಕಿ ಆರಂಭವಾಗಿದೆ. ಸಮೀಪದಲ್ಲೇ ಲೈಟರ್ ಕ್ಯಾಪ್ ಕೂಡ ಪತ್ತೆಯಾಗಿದೆ. ಬಸ್‌ನ ಹಲವು ಸ್ಥಳಗಳಲ್ಲಿ ಪೆಟ್ರೋಲ್‌ನ ಅಂಶ ಪತ್ತೆಯಾಗಿದೆ’’ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಕ್ಸಿನುವಾ ವರದಿ ಮಾಡಿದೆ.

‘‘ಚಾಲಕನ ಓವರ್‌ಟೈಮ್ ಮತ್ತು ರಾತ್ರಿ ಪಾಳಿಯ ಭತ್ತೆಯನ್ನು ತಡೆಹಿಡಿಯಲಾಗಿತ್ತು. ಇದರಿಂದ ಕೋಪಗೊಂಡ ಆತ ಬಸ್‌ಗೆ ಬೆಂಕಿ ಕೊಡುವುದಕ್ಕಾಗಿ ಪೆಟ್ರೋಲ್ ಖರೀದಿಸಿದ್ದ’’ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News