ಜಾನುವಾರು ವ್ಯಾಪಾರ ನಿಷೇಧದಿಂದ ಅರ್ಥವ್ಯವಸ್ಥೆಗೆ ಹಾನಿ: ಮಿಝೋರಂ ಸಂಸದ

Update: 2017-06-02 15:06 GMT

ಮಿಝೋರಂ, ಜೂ.2: ಗೋಮಾಂಸ ಮತ್ತು ಎಮ್ಮೆ ಮಾಂಸದ ವ್ಯಾಪಾರ ದೇಶದ ಜಿಡಿಪಿಗೆ ಶೇ.18ರಷ್ಟು ಕೊಡುಗೆ ನೀಡುತ್ತಿದ್ದು ಜಾನುವಾರು ವ್ಯಾಪಾರ ನಿಷೇಧದಿಂದ ಅರ್ಥವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಉಂಟಾಗಿದೆ ಎಂದು ಮಿಝೋರಂನ ಏಕೈಕ ಸಂಸದ ರೊನಾಲ್ಡ್ ಸಪ ತ್ಲವು ಹೇಳಿದ್ದಾರೆ.

ರಾಜ್ಯದ ರಾಜಧಾನಿ ಐಝಾವಲ್‌ನಲ್ಲಿರುವ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಗೋಮಾಂಸ ವ್ಯಾಪಾರ ನಿಷೇಧಿಸುವ ಮೂಲಕ ದೇಶದ ಒಕ್ಕೂಟ ವ್ಯವಸ್ಥೆಗೆ ಭಂಗ ತಂದಿದೆ ಎಂದವರು ದೂರಿದರು.

    ಈ ಆದೇಶವು ಸಂವಿಧಾನವು ದೇಶದ ಪ್ರಜೆಗಳಿಗೆ ನೀಡಿರುವ ಆಹಾರದ ಹಕ್ಕನ್ನು ನಿರಾಕರಿಸಿದೆ. ಬಿಜೆಪಿ ಮತ್ತು ಆರೆಸ್ಸೆಸ್‌ನ ಇಂತಹ ತೀವ್ರಗಾಮಿ ನಡೆಗಳು ಖಂಡಿತಾ ತಿರುಗು ಬಾಣವಾಗಲಿದೆ ಎಂದು ಎಚ್ಚರಿಸಿದ ಅವರು, ನೋಟು ಅಮಾನ್ಯೀಕರಣವು ಬಿಜೆಪಿಯ ಗುಪ್ತ ಕಾರ್ಯಸೂಚಿಯ ಒಂದು ಭಾಗವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News