ಡಾ.ನಾಗೇಶ್ ರಾವ್‌ಗೆ ಅಕಾಡೆಮಿ ಪ್ರಶಸ್ತಿ
Update: 2017-06-02 20:39 IST
ಉಡುಪಿ, ಜೂ.2: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿ ವತಿಯಿಂದ ವೈದ್ಯಕೀಯ ವಿಷಯ ವಿಭಾಗದಲ್ಲಿ ನೀಡುವ ಶ್ರೇಷ್ಠ ಲೇಖಕ ಪ್ರಶಸ್ತಿಗೆ ಮಣಿಪಾಲ ಕೆಎಂಸಿಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವಿಶ್ರಾಂತ ಮುಖ್ಯಸ್ಥ ಡಾ.ನಾಗೇಶ್ ಕುಮಾರ್ ಜಿ.ರಾವ್ ಅವರ ‘ನ್ಯಾಯ ವೈದ್ಯ ಶಾಸ್ತ್ರ ಮರಣೋತ್ತರ ಶವ ಪರೀಕ್ಷೆ’ ಪುಸ್ತಕ ಆಯ್ಕೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.