‘ವಿಕಾಸ’ ಬೇಸಿಗೆ ಶಿಬಿರ ಸಮಾರೋಪ

Update: 2017-06-02 15:17 GMT

ಉಡುಪಿ, ಜೂ.2: ತೆಂಕನಿಡಿಯೂರು ಬಾಲಸಂಸ್ಕಾರ ಕೇಂದ್ರ, ಶ್ರೀ ಕಾಳಿ ಕಾಂಬಾ ಭಜನಾ ಸಂಘ ಹಾಗೂ ಶ್ರೀದೇವಿ ಮಹಿಳಾ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ‘ವಿಕಾಸ-2017’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.

ಮುಖ್ಯ ಅತಿಥಿಯಾಗಿ ಪತ್ರಕರ್ತ ಧನಂಜಯ ಮೂಡಬಿದ್ರೆ ಮಾತನಾಡಿ, ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್‌ಗಳಿಗೆ ದಾಸರಾಗದೆ ಸೃಜನಾತ್ಮಕ ಚಟುವಟಿಕೆ ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಬೇಸಿಗೆ ಶಿಬಿರಗಳು ವಿದ್ಯಾರ್ಥಿಗಳ ಸೃಜನಾತ್ಮಕ ಚಟುವಟಿಕೆಗಳಿಗೆ ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿ ಜೀವನ ದಲ್ಲಿರುವಾಗಲೇ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಕಲಿಯಬೇಕು ಎಂದು ಹೇಳಿದರು.

ನಿವೃತ್ತ ಶಿಕ್ಷಕ ದಾಮೋದರ ಎಲ್. ಆಚಾರ್ಯ ಮಾತನಾಡಿದರು. ಅಧ್ಯಕ್ಷತೆ ಯನ್ನು ಶ್ರೀಕಾಳಿಕಾಂಬಾ ಭಜನಾ ಸಂಘದ ಅಧ್ಯಕ್ಷ ಟಿ.ಕೃಷ್ಣ ಆಚಾರ್ಯ ವಹಿಸಿದ್ದರು. ಮಹಿಳಾ ಮಂಡಳಿಯ ಅಧ್ಯಕ್ಷೆ ಪೂರ್ಣಿಮಾ ರಾಮಚಂದ್ರ ಆಚಾರ್ಯ, ಬಾಲ ಸಂಸ್ಕಾರ ಕೇಂದ್ರದ ಅಧ್ಯಕ್ಷ ಪ್ರದೀಪ್ ಆಚಾರ್ಯ ಉಪಸ್ಥಿತರಿದ್ದರು.
 

ಶಿಬಿರದ ವರದಿಯನ್ನು ಶಿಬಿರಾಧಿಕಾರಿ ಶಶಿಕಲಾ ಆಚಾರ್ಯ ಉಪ್ಪೂರು ಮಂಡಿಸಿದರು. ಸಂಪನ್ಮೂಲ ವ್ಯಕ್ತಿ ಬೈಕಾಡಿ ಜನಾರ್ದನ ಆಚಾರ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಶಿಬಿರದ ಕ್ಷೇಮಪಾಲ ಉದಯ ಆಚಾರ್ಯ ಸ್ವಾಗತಿಸಿದರು. ಶಿಬಿರ ನಿರ್ದೇಶಕಿ ಸುಷ್ಮಾ ರಾಜೇಶ್ ಆಚಾರ್ಯ ವಂದಿಸಿದರು. ಪ್ರಪುಲ್ಲ ತೆಂಕನಿಡಿಯೂರು ಕಾರ್ಯಕ್ರಮ ನಿರೂಪಿಸಿದರು.

ಎಂಟು ದಿನಗಳ ಕಾಲ ನಡೆದ ಶಿಬಿರದಲ್ಲಿ 50 ಶಿಬಿರಾರ್ಥಿಗಳು ಪಾಲ್ಗೊಂಡಿದ್ದು, ಒರಿಗಾಮಿ, ಪೇಪರ್ ಕ್ರಾಪ್ಟ್, ವುಲ್ಲನ್ ಕ್ರಾಪ್ಟ್, ಹಾಡುಗಳು, ಕೊಲಾಜ್, ಮಾನವ ಸಂಪನ್ಮೂಲ ತರಬೇತಿ, ಮೂಕಾಭಿನಯ ಇತ್ಯಾದಿಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಪಿ.ಎನ್.ಆಚಾರ್ಯ, ಬೈಕಾಡಿ ಜನಾರ್ದನ ಆಚಾರ್, ರತ್ನಾವತಿ ಜೆ.ಬೈಕಾಡಿ, ಪಲ್ಲವಿ ಕೊಡಗು, ದೃಶ ಕೊಡಗು, ಸಂದೀಪ್ ರಾವ್ ಶಿರ್ವ, ತಾರನಾಥ್ ಕೈರಂಗಳ ನಡೆಸಿಕೊಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News