ಪಂಚಾಯತ್‌ರಾಜ್ ಸಂಘಟನೆ ಸಭೆ
Update: 2017-06-02 21:34 IST
ಉಡುಪಿ, ಜೂ.2: ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ಉಡುಪಿ ಇದರ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆ ಜೂ.5ರ ಸೋಮವಾರ ಬೆಳಗ್ಗೆ 10:00ಕ್ಕೆ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ನಡೆಯಲಿದೆ.
ಸಭೆಯಲ್ಲಿ ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ರಾಜ್ಯ ಸಂಚಾಲಕ ಬಿ.ಎಂ. ಸಂದೀಪ್, ವಲಯ ಸಂಚಾಲಕ ರಂಗಸ್ವಾಮಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಾಜೀರಾವ್ ಖಡೆಜೀ ಹಾಗೂ ಇತರ ನಾಯಕರುಗಳು ಭಾಗವಹಿಸಲಿದ್ದಾರೆ.
ಸಭೆಯಲ್ಲಿ ಆರ್‌ಜಿಪಿಆರ್‌ಎಸ್‌ನ ಜಿಲ್ಲಾ ಸಹ ಸಂಯೋಜಕರು ಹಾಗೂ ಜಿಪಂ ವ್ಯಾಪ್ತಿಯ ಸಂಯೋಜಕರು ಭಾಗವಹಿಸುವಂತೆ ಆರ್‌ಜಿಪಿಆರ್‌ಎಸ್‌ನ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.