×
Ad

ಬಾವಿಗೆ ಬಿದ್ದ ಕಾರ್ಮಿಕನ ರಕ್ಷಣೆ

Update: 2017-06-02 21:36 IST

ಉಡುಪಿ, ಜೂ.2: ಇಲ್ಲಿಗೆ ಸಮೀಪದ ಗುಂಡಿಬೈಲ್ ಜುಮಾದಿ ದೈವಸ್ಥಾನದ ಸಮೀಪದ ಮನೆಯೊಂದರ ಬಾವಿಗೆ ಬಿದ್ದು ಗಾಯಗೊಂಡ ಕಾರ್ಮಿಕರೊಬ್ಬ ರನ್ನು ಅಗ್ನಿ ಶಾಮಕದಳದ ಸಿಬ್ಬಂದಿಗಳು ಸಕಾಲದಲ್ಲಿ ರಕ್ಷಿಸಿದ ಘಟನೆ ಇಂದು ಅಪರಾಹ್ನದ ವೇಳೆ ನಡೆದಿದೆ.

ಬಾಗಲಕೋಟೆಯ ಸುನ್ತಾನ್ (35) ಎಂಬವರು ಗಾಯಗೊಂಡ ಕಾರ್ಮಿಕ. ಇವರು ಗುಂಡಿಬೈಲಿನ ಐವನ್ ಸೊಟೋಡೊ ಎಂಬವರ ಹೂಳು ತುಂಬಿದ 40 ಅಡಿ ಆಳದ ಬಾವಿಯನ್ನು ಶುಚಿಗೊಳಿಸಲು ಇಂದು ಬೆಳಗ್ಗೆ ಬಾವಿಗೆ ಇಳಿದಿ ದ್ದರು. ಶುಚಿಗೊಳಿಸಿದ ಬಳಿಕ ಹಗ್ಗದ ಸಹಾಯದಿಂದ ಬಾವಿಯಿಂದ ಮೇಲಕ್ಕೆ ಹತ್ತುತ್ತಿದ್ದ ಸುನ್ತಾನ್ ಹಗ್ಗ ತುಂಡಾದ ಪರಿಣಾಮ ಬಾವಿಗೆ ಬಿದ್ದರೆನ್ನಲಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಸುನ್ತಾನ್‌ರನ್ನು ಉಡುಪಿ ಅಗ್ನಿಶಾಮಕದಳ ಸಿಬ್ಬಂದಿಗಳು ಸುಮಾರು ಒಂದು ಗಂಟೆಗಳ ಸತತ ಕಾರ್ಯಾಚರಣೆಯ ಮೂಲಕ ಮೇಲಕ್ಕೆತ್ತಿದರು. ಗಾಯಗೊಂಡಿರುವ ಸುನ್ತಾನ್ ಮಣಿಪಾಲ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News