ಅಕ್ರಮ ಜಾನುವಾರು ಸಾಗಾಟ: ಓರ್ವನ ಸೆರೆ
Update: 2017-06-02 21:45 IST
ಕುಂದಾಪುರ, ಜೂ.2: ಅಕ್ರಮವಾಗಿ 407 ವಾಹನದಲ್ಲಿ ಜಾನುವಾರು ಗಳನ್ನು ಸಾಗಾಟ ಮಾಡುತ್ತಿದ್ದ ಓರ್ವನನ್ನು ಕುಂದಾಪುರ ಪೊಲೀಸರು ಕುಂಭಾಶಿ ಸ್ವಾಗತ ಗೋಪುರ ಸಮೀಪ ಬಂಧಿಸಿದ್ದಾರೆ.
ಬಂಧಿತನನ್ನು ಕುಳಾಯಿ ನಿವಾಸಿ ಅಬ್ದುಲ್ ಖಾದರ್ (38) ಎಂದು ಗುರು ತಿಸಲಾಗಿದೆ.
ಈತನೊಂದಿಗೆ ಇದ್ದ ಅಬೂಬಕರ್ ಕೃಷ್ಣಾಪುರ, ಅಶ್ರಫ್ ಕುಳಾಯಿ, ಉಸ್ಮಾನ್ ಕುಳಾಯಿ ಪರಾರಿಯಾಗಿದ್ದಾರೆ.
407 ಗೂಡ್ಸ್ ಟೆಂಪೊ, ಅದರಲ್ಲಿದ್ದ ಮೂರು ದನ ಹಾಗೂ ಒಂದು ಗಂಡು ಕರುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.