×
Ad

ಎಸ್ಸೆಸ್ಸೆಫ್ ಪಾಣೆಮಂಗಳೂರು ಸೆಕ್ಟರ್ ವತಿಯಿಂದ ಉಚಿತ ಪುಸ್ತಕ ವಿತರಣೆ

Update: 2017-06-02 21:57 IST

ಬಂಟ್ವಾಳ, ಜೂ. 2: ಎಸ್ಸೆಸ್ಸೆಫ್ ಪಾಣೆಮಂಗಳೂರು ಸೆಕ್ಟರ್ ವತಿಯಿಂದ ’ಮರಳಿ ಶಾಲೆಗೆ’ ಅಭಿಯಾನ - 2017ರ ಪ್ರಯುಕ್ತ ಸೆಕ್ಟರ್ ವ್ಯಾಪ್ತಿಯ ಬಡ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಆಲಡ್ಕದ ಎಸ್ಸೆಸ್ಸೆಫ್ ಕಚೇರಿಯಲ್ಲಿ ಜರಗಿತು.

ಸೆಕ್ಟರ್ ಅಧ್ಯಕ್ಷ ಅಕ್ಬರ್ ಅಲಿ ಮದನಿ ಆಲಂಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಆಲಡ್ಕ ಜುಮಾ ಮಸೀದಿ ಮುದರ್ರಿಸ್ ಅಶ್ರಫ್ ಸಖಾಫಿ ಸವಣೂರು ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.

ವೇದಿಕೆಯಲ್ಲಿ ಎಸ್ಸೆಸ್ಸೆಫ್ ಬಂಟ್ವಾಳ ಡಿವಿಶನ್ ಕಾರ್ಯದರ್ಶಿ ಇರ್ಶಾದ್ ಗೂಡಿನಬಳಿ, ಪಾಣೆಮಂಗಳೂರು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅನ್ಸಾರ್ ಕಾರಾಜೆ, ಕಾರ್ಯದರ್ಶಿ ಮುಹಮ್ಮ್ ಶಿಫಾನ್ ಆಲಡ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News