ಬಿಹಾರ: 42 ವರ್ಷದ ಕಲಾವಿಭಾಗದ ಟಾಪರ್ ಗಣೇಶ್ ಕುಮಾರ್ ಬಂಧನ
ಪಾಟ್ನಾ, ಜೂ.2: ಬಿಹಾರದಲ್ಲಿ ಕಲಾವಿಭಾಗದ 12ನೆ ತರಗತಿಯ ಟಾಪರ್ ಆಗಿ ಉತ್ತೀರ್ಣನಾಗಿದ್ದ ಗಣೇಶ್ ಕುಮಾರ್ ನ ಫಲಿತಾಂಶವನ್ನು ಬಿಹಾರ ಶಾಲಾ ಪರೀಕ್ಷಾ ಬೋರ್ಡ್ ರದ್ದುಗೊಳಿಸಿದ ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಶೈಕ್ಷಣಿಕ ಸಾಮರ್ಥ್ಯವನ್ನು ವಿಫಲವಾದ ನಂತರ ಗಣೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂಗೀತ ವಿಷಯದ ಪ್ರಾಯೋಗಿಕ ಪರೀಕ್ಷೆಯಲ್ಲಿ 70ರಲ್ಲಿ 65, ಥಿಯರಿಯಲ್ಲಿ 30ರಲ್ಲಿ 18 ಹಾಗೂ ಹಿಂದಿ ವಿಷಯದಲ್ಲಿ ಗಣೇಶ್ ಕುಮಾರ್ 100ರಲ್ಲಿ 92 ಅಂಕಗಳನ್ನು ಗಳಿಸಿದ್ದ. ಆದರೆ ಆತ ಅತೀ ಹೆಚ್ಚು ಅಂಕ ಗಳಿಸಿದ ವಿಷಯಗಳಲ್ಲಿನ ಸಾಮಾನ್ಯ ಪ್ರಶ್ನೆಗಳಿಗೂ ಉತ್ತರಿಸಲು ವಿಫಲನಾದ ನಂತರ ಗಣೇಶ್ ಕುಮಾರ್ ಫಲಿತಾಂಶದ ಬಗ್ಗೆ ಅನುಮಾನ ಹುಟ್ಟಿಕೊಂಡಿತ್ತು.
ಆದರೆ ಬಿಹಾರ ಶಿಕ್ಷಣ ಸಚಿವ ಅಶೋಕ್ ಚೌಧರಿ ಗಣೇಶ್ ಕುಮಾರ್ ಪ್ರತಿಭಾವಂತ ವಿದ್ಯಾರ್ಥಿ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಗಣೇಶ್ ನ ಫಲಿತಾಂಶದಿಂದ ಸಂತಸಗೊಂಡಿದ್ದಾರೆ ಎಂದಿದ್ದರು.
ಇಷ್ಟೇ ಅಲ್ಲದೆ 42ರ ಹರೆಯದ ಗಣೇಶ್ ತನ್ನ ವಯಸ್ಸು 24 ಎಂದು ಹೇಳಿಕೊಂಡಿದ್ದ.