×
Ad

ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಪ್ರೇಮಿಗಳ ದಿನಾಚರಣೆ ಕಾರಣ: ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್

Update: 2017-06-02 23:05 IST

ಹೊಸದಿಲ್ಲಿ, ಜೂ.2: ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಪ್ರೇಮಿಗಳ ದಿನಾಚರಣೆಯೇ ಕಾರಣ ಎಂದು ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಹೇಳಿದ್ದಾರೆ.

ಆರೆಸ್ಸೆಸ್ ಕಾರ್ಯಕರ್ತರ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಪ್ರೀತಿಯು ಪವಿತ್ರವಾಗಿದೆ. ರಾಧಾ-ಕೃಷ್ಣ, ಲೈಲಾ-ಮಜ್ನು  ಹಾಗೂ ಹೀರ್-ರಾಂಝಾರ ಪ್ರೇಮಕಥೆಗಳನ್ನು ಭಾರತದಲ್ಲಿ ಹೇಳಲಾಗುತ್ತದೆ. ಆದರೆ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಪ್ರೀತಿಯು ವಾಣಿಜ್ಯೀಕರಣಗೊಂಡಿದ್ದು, ಅತ್ಯಾಚಾರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಾರಣವಾಗುವ ಪ್ರೇಮಿಗಳ ದಿನಗಳಂತಹ ಆಚರಣೆಯನ್ನು ಹುಟ್ಟುಹಾಕುತ್ತಿವೆ” ಎಂದರು.

ಕೇವಲ ಭಾರತ ಮಾತ್ರವಲ್ಲ, ಇಡೀ ಜಗತ್ತು ಈ ಸಮಸ್ಯೆಯನ್ನು ಎದುರಿಸುತ್ತಿದೆ. ಆರೆಸ್ಸೆಸ್ ಜನರ ಆತ್ಮ ಹಾಗೂ ಸ್ವಭಾವವನ್ನು ಶುದ್ಧಿಕರಿಸುತ್ತಿದೆ ಎಂದು ಇಂದ್ರೇಶ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News