×
Ad

ಆರ್ಥಿಕವಾಗಿ ಬಲಿಷ್ಠರಾಗಲು ಶಿಕ್ಷಣದಿಂದ ಸಾಧ್ಯ: ಯು.ಟಿ.ಖಾದರ್

Update: 2017-06-02 23:14 IST

ಕೊಣಾಜೆ, ಜೂ.2: ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಬಲಿಷ್ಠರಾಗುವ ಉದ್ದೇಶ ಯುವ ಸಮುದಾಯ ದ್ದಾಗಿರಬೇಕು. ಆರ್ಥಿಕವಾಗಿ ಬಲಿಷ್ಠರಾಗಲು ಶಿಕ್ಷಣದಿಂದ ಮಾತ್ರ ಸಾಧ್ಯ, ಈ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯ ನೆರವನ್ನು ನೀಡುತ್ತಿದೆ, ಶಾಲೆಯಲ್ಲಿ ಅನುತ್ತೀರ್ಣರಾದ ಮಕ್ಕಳನ್ನು ಉತ್ತೀರ್ಣರನ್ನಾಗಿಸುವ ಒತ್ತಡವೂ ಸಲ್ಲದು ಎಂದು ಆಹಾರ ಸಚಿವ ಯು.ಟಿ.ಖಾದರ್ ಅವರು ಹೇಳಿದರು.

ದೇರಳಕಟ್ಟೆ ನೇತಾಜಿ ಸುಭಾಶ್ಚಂದ್ರ ಬೋಸ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ದಾಖಲಾತಿ ಆಂದೋಲನ ಪ್ರಯುಕ್ತ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ, ಬೈಸಿಕಲ್, ಶೂ ಹಾಗೂ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.

 ಶಾಲೆಯಲ್ಲಿ ಮಕ್ಕಳ ಉತ್ತಮ ಜೀವನ, ಗುಣ ನಡತೆ ತಿದ್ದುವ ಉದ್ದೇಶದಿಂದ ಶಿಕ್ಷಕರು ಗದರಿಸುತ್ತಾರೆ, ಆದರೆ ಅದನ್ನೇ ದೊಡ್ಡದಾಗಿ ಚಿತ್ರೀಕರಿಸಿ ಶಿಕ್ಷಕರನ್ನೇ ಗದರಿಸುವ, ಪ್ರಶ್ನಿಸುವ ಕೆಲಸ ಪೋಷಕರಿಂದ ನಡೆಯಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂ. ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯ ಅಬ್ದುಲ್ ಜಬ್ಬಾರ್, ಬೆಳ್ಮ ಗ್ರಾಮ ಪಂ. ಅಧ್ಯಕ್ಷೆ ವಿಜಯಾ ಕೃಷ್ಣಪ್ಪ, ಉಪಾಧ್ಯಕ್ಷ ಬಿ.ಎಂ.ಅಬ್ದುಲ್ ಸತ್ತಾರ್, ಸದಸ್ಯರಾದ ಕಬೀರ್ ಡಿ, ಅಬ್ದುಲ್ಲಾ, ರಝಾಕ್, ಯೂಸುಫ್ ಬಾವ, ಉಳ್ಳಾಲ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಬಂಟ್ವಾಳ ತಾಲೂಕು ಪಂ. ಸದಸ್ಯ ಹೈದರ್ ಕೈರಂಗಳ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಸಮೂಹ ಸಂಪನ್ಮೂಲ ವ್ಯಕ್ತಿ ದಾಕ್ಷಾಯಿಣಿ, ರವಿರಾಜ್ ರೈ ದೇರಳಕಟ್ಟೆ, ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News