ಜೂ. 4: ಶೇಕಮಲೆಯಲ್ಲಿ ಬೇಕಲ್ ಉಸ್ತಾದ್ ತರಗತಿ
Update: 2017-06-02 23:23 IST
ಪುತ್ತೂರು, ಜೂ.2: ರಮಝಾನ್ ಪ್ರಯುಕ್ತ ಶೇಕಮಲೆ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಜೂ. 4ರಂದು ಮದ್ಯಾಹ್ನ ಧಾರ್ಮಿಕ ಅಧ್ಯಯನ ತರಗತಿ ನಡೆಯಲಿದ್ದು ಕಾರ್ಯಕ್ರಮದಲ್ಲಿ ಉಡುಪಿ ಖಾಝಿ ಪಿ ಎಂ ಇಬ್ರಾಹಿಂ ಮುಸ್ಲಿಯಾರ್ ( ಬೇಕಲ್ ಉಸ್ತಾದ್) ಅವರಿಂದ ‘ಗೊಂದಲಮಯ ಜಗತ್ತಿನಲ್ಲಿ ಈಮಾನ್ ಸಂರಕ್ಷಣೆಯ ಮಾರ್ಗಗಳು’ ಎಂಬ ವಿಚಾರದಲ್ಲಿ ತರಗತಿ ನಡೆಯಲಿದೆ ಎಂದು ಜಮಾಅತ್ ಕಮಿಟಿ ಪ್ರಕಟಣೆ ತಿಳಿಸಿದೆ.
ಮಸೀದಿ ಕಮಿಟಿಯ ಗೌರವಾಧ್ಯಕ್ಷ ಕೆ ಪಿ ಅಹ್ಮದ್ ಹಾಜಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸ್ಥಳೀಯ ಮುದರ್ರಿಸ್ ಆದಂ ಅಹ್ಸನಿ ಮತ್ತು ಜಮಾತ್ ಅಧ್ಯಕ್ಷ ಸಿದ್ದಿಕ್ ಹಾಜಿ ಶೇಕಮಲೆ ಉಪಸ್ಥಿತರಿರುವರು.
ಬೆಳಗ್ಗೆ ಗಂಟೆ 10 ರಿಂದ ಶೇಕಮಲೆ ಮರ್ಕರ್ ಸಭಾಂಗಣದಲ್ಲಿ ಮಹಿಳೆಯವರಿಗಾಗಿ ವಿಶೇಷ ತರಗತಿ ನಡೆಯಲಿದೆ.
ಅಬ್ದುಲ್ ಜಬ್ಬಾರ್ ಸಖಾಫಿ ಮರ್ಕಝ್ ಶರೀಅತ್ ಮುದರ್ರಿಸ್ ಮಹಿಳೆ, ಮನೆಯೊಡತಿ ಎಂಬ ವಿಷಯದ ಕುರಿತು ತರಗತಿ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.