ಮಂಗಳೂರು ವಿವಿ ದೂರ ಶಿಕ್ಷಣ ಪರೀಕ್ಷಾ ವೇಳಾಪಟ್ಟಿ ಪ್ರಕಟ
Update: 2017-06-02 23:46 IST
www.mangaloreuniversity.ac.inಮಂಗಳೂರು, ಜೂ.2: ದೂರ ಶಿಕ್ಷಣದ ಕಾರ್ಯಕ್ರಮದಡಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಪರೀಕ್ಷೆಗಳು ಮೇ 15ರಿಂದ ಮಂಗಳೂರು, ಪುತ್ತೂರು, ಉಡುಪಿ, ಮಡಿಕೇರಿ ಮತ್ತು ಕುಶಾಲನಗರದ ಪರೀಕ್ಷಾ ಕೇಂದ್ರಗಳಲ್ಲಿ ಪ್ರಾರಂಭವಾಗಲಿದೆ. ಪರಿಷ್ಕೃತ ವೇಳಾಪಟ್ಟಿ ಮತ್ತು ಪರೀಕ್ಷಾ ಕೇಂದ್ರದ ವಿವರ ವಿಶ್ವವಿದ್ಯಾನಿಲಯದ ವೆಬ್‌ಸೈಟ್ ನಲ್ಲಿ ಲಭ್ಯ ಎಂದು ಪ್ರಕಟನೆ ತಿಳಿಸಿದೆ.