‘ಜಮೀಯತುಲ್ ಸ-ಅದಾ’ದಿಂದ ಪುಸ್ತಕ ವಿತರಣೆ
Update: 2017-06-03 15:09 IST
ಮಂಗಳೂರು, ಜೂ.3: ನಗರದ ಕುದ್ರೋಳಿಯ ಜಮೀಯತುಲ್ ಸ-ಅದಾ ಅಸೋಸಿಯೇಶನ್ (ಮಾಂಸ ವ್ಯಾಪಾರಸ್ಥರ ಸಂಘ) ವತಿಯಿಂದ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವ ಕಾರ್ಯಕ್ರಮ ನಡೆಯಿತು.
ಮಾಂಸ ವ್ಯಾಪಾರಸ್ಥರ ಸಂಘದ ರಾಜ್ಯ ಉಪಾಧ್ಯಕ್ಷ ಅಲಿ ಹಸನ್ ಮಾತನಾಡಿ, ಇದು 21ನೆ ವಾರ್ಷಿಕ ಪುಸ್ತಕ ವಿತರಣೆ ಕಾರ್ಯಕ್ರಮವಾಗಿದೆ. ಈ ಬಾರಿ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ 1ರಿಂದ 10ನೆ ತರಗತಿವರೆಗಿನ 1 ಸಾವಿರ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಗುವುದು ಎಂದರು.
ಕಾರ್ಪೊರೇಟರ್ ಅಬ್ದುಲ್ ಅಝೀಝ್ ಕುದ್ರೋಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಿಪಿಎಂ ಮುಖಂಡ ಸುನೀಲ್ ಕುಮಾರ್ ಬಜಾಲ್, ಪಶು ವೈದ್ಯಾಧಿಕಾರಿ ಕಮಲಾ ಭಾಗವಹಿಸಿದ್ದರು. ಜೆ. ಅಬ್ದುಲ್ ಖಾದರ್, ಬಶೀರ್, ಇಸ್ಮಾಯೀಲ್ ಮತ್ತಿತರರು ಉಪಸ್ಥಿತರಿದ್ದರು.